ಈ ವಾರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಚಿತ್ರ ವಿಜಯಾನಂದ. ಚಿತ್ರವನ್ನು ನೋಡಿದ ಪ್ರೇಕ್ಷಕ ಪ್ರಭು ವಿಜಯಾನಂದ ಚಿತ್ರವನ್ನು ಮೆಚ್ಚಿ ಕೊಂಡಾಡುತ್ತಿದ್ದಾನೆ. ಒಂದು ಸಿನಿಮಾ ಯಾವ ರೀತಿ ಪ್ರೇಕ್ಷಕರನ್ನು ಸೆಳೆಯಬಲ್ಲದೋ.. ಅದನ್ನೂ ಮೀರಿ ಸಿನಿಮಾ ಸ್ಫೂರ್ತಿ ತುಂಬುತ್ತಿದೆ. ಅಫ್‍ಕೋರ್ಸ್.. ವಿಜಯ ಸಂಕೇಶ್ವರ ಎಂಬ ಹುಡುಗ, ದೇಶವೇ ಮೆಚ್ಚುವ ಉದ್ಯಮಪತಿಯಾಗಿದ್ದೇ ರೋಚಕ ಮತ್ತು ರೋಮಾಂಚಕ.
ಹುಬ್ಬಳ್ಳಿಯ ಹುಡುಗ ವಿಜಯ್ 1 ಲಾರಿ ಖರೀದಿಸಿ, 2 ಲಾರಿ ಖರೀದಿಸಿ.. ಅದನ್ನು ಮೂರು..4..10.. ಹೀಗೆ ವಿಸ್ತರಿಸಿ ವಿಆರ್‍ಎಲ್ ಎಂಬ ಸಂಸ್ಥೆಯನ್ನೇ ಕಟ್ಟಿದ್ದು, ವಿಜಯ ಕರ್ನಾಟಕ, ವಿಜಯವಾಣಿ, ವಿಜಯ ಟೈಮ್ಸ್, ದಿಗ್ವಿಜಯ ಟಿವಿ ಎಂಬ ಸುದ್ದಿ ಸಂಸ್ಥೆ ಕಟ್ಟಿದ್ದು.. ಪ್ರತಿಯೊಂದು ಹೆಜ್ಜೆಯೂ ಸ್ಫೂರ್ತಿದಾಯಕವೇ. ಇದೆಲ್ಲ ಹೇಗೆ ಸಾಧ್ಯವಾಯ್ತು ಅನ್ನೋ ಕುತೂಹಲವಿದ್ದ ಪ್ರೇಕ್ಷಕರಿಗೆ ಸಿನಿಮಾದಲ್ಲಿ ಹೇಳುವ ಕಥೆ ಮನ ಮುಟ್ಟಿದೆ.
ಅನಂತನಾಗ್, ರವಿಚಂದ್ರನ್, ವಿನಯಾ ಪ್ರಸಾದ್ ನಟಿಸಿರುವ ಚಿತ್ರದಲ್ಲಿ ನಿಹಾಲ್ ವಿಜಯ ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ. ಸಿರಿ ಪ್ರಹ್ಲಾದ್, ಭರತ್ ಬೋಪಣ್ಣ, ಅರ್ಚನಾ ಕೊಟ್ಟಿಗೆ ಮೊದಲಾದವರು ನಟಿಸಿರುವ ಚಿತ್ರಕ್ಕೆ ರಿಷಿಕಾ ಶರ್ಮಾ ನಿರ್ದೇಶಕಿ
ಇನ್ನೂ ವಿಶೇಷವೆಂದರೆ ಇಡೀ ಚಿತ್ರತಂಡದವರಿಗೆ.. ನಿಹಾಲ್, ಸಿರಿ ಪ್ರಹ್ಲಾದ್, ನಿರ್ದೇಶಕಿ ರಿಷಿಕಾ.. ಹೀಗೆ ಎಲ್ಲರಿಗೂ ವಿಜಯ ಸಂಕೇಶ್ವರ ಎಂಬ ಹೆಸರೇ ಸ್ಫೂರ್ತಿ. ನಟಿಸುವವರೆಲ್ಲ ಪ್ರೀತಿಯಿಂದ ಅಭಿಮಾನದಿಂದ ನಟಿಸಿರುವುದು ಇಡೀ ಚಿತ್ರದಲ್ಲಿ ಎದ್ದು ಕಾಣುತ್ತದೆ.