ಸಾಯಿಕುಮಾರ್ ಹೀರೋ. ಸೆಂಟಿಮೆಂಟ್ ಚಿತ್ರಗಳಿಂದಲೇ ಹೆಸರುವಾಸಿಯಾದ ಅಜಯ್ ಕುಮಾರ್ ಕಥೆ-ಚಿತ್ರಕಥೆ. ರಾಜಶೇಖರ್ ಪನ್ನು ಸಂಬಾಷಣೆ. ರಜತ್ ನಿರ್ದೇಶನ. ಸಾಯಿಕುಮಾರ್ರನ್ನು ಸ್ಟಾರ್ ಮಾಡಿದ ಥ್ರಿಲ್ಲರ್ ಮಂಜು ಸಾಹಸ ನಿರ್ದೇಸನ. ರಮೇಶ್ ಕಶ್ಯಪ್ ಅವರ ಗರುಡಾದ್ರಿ ಸಿನಿಮಾಸ್ ನಿರ್ಮಾಣ.. ಹೀಗೆ ರಾಕ್ಷಸರು ಟೀಮಿನಲ್ಲಿ ಎಲ್ಲರೂ ಒಟ್ಟಾಗಿ ಸೇರಿದ್ದಾರೆ. ಸಾಯಿಕುಮಾರ್ ಎದುರು ಟಗರು ಸರೋಜಾ ಖ್ಯಾತಿಯ ರಿಷಿಕಾ ನಾಯಕಿ.
ತಮ್ಮ ಬದಲು ತಮ್ಮ ಚಿತ್ರದಲ್ಲಿ ನಟಿಸಿರುವ ಪುನೀತ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ಸಾಯಿಕುಮಾರ್ ಪುನೀತ್ ಅವರಿಗೆ ಈ ಚಿತ್ರ ನೋಡಿದವರು ಯಾರೂ ಹೆಣ್ಣು ಕೊಡಲ್ಲ. ಅಷ್ಟರಮಟ್ಟಿಗೆ ಪಾತ್ರದೊಳಗೆ ಇಳಿದಿದ್ದಾರೆ. ರಾಕ್ಷಸರು ಚಿತ್ರದಲ್ಲಿ ಬಹುತೇಕರು ಹೊಸಬರು. ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದು ಇಡೀ ತಂಡವನ್ನು ಹೊಗಳಿದ್ದಾರೆ. ರಾಜಶೇಖರ್, ಸುಮನ್, ನಾಜರ್, ಕಿರಣ್, ಸುನಿಲ್, ಅವಿನಾಶ್ ನೀರಜ್ ಯಾದವ್, ಪುನೀತ್, ಅಂಜಿ, ಜಿತಿನ್, ಹರ್ಷಿತ್, ಚೈತ್ರಾ, ಮಾನಸಾ, ಆಶಾ, ಮಂಜುಳಾ, ಸುರೇಖಾ, ರಚನಾ, ಕಮಲಾ, ಚಂದ್ರಕಲಾ ರಾಧ.. ಹೀಗೆ ಹಳಬರು ಹಾಗೂ ಹೊಸಬರ ತಂಡದ ಮಿಶ್ರಣ ರಾಕ್ಷಸರು. ಸಿನಿಮಾ ಇದೇ 16ರಂದು ರಿಲೀಸ್ ಆಗುತ್ತಿದೆ.
ರಾಕ್ಷಸರು ಸಿನಿಮಾದಲ್ಲಿ ಕ್ರೈಂ ಹೆಚ್ಚಾಗಿಯೇ ಇದೆ. ಕ್ರೌರ್ಯವೂ ಹೆಚ್ಚು. ಎಲ್ಲ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಒಂದೊಂದು ಭಾಷೆಯ ಸೆನ್ಸಾರ್ನಲ್ಲಿ ಒಂದೊಂದು ದೃಶ್ಯಕ್ಕೆ ಕಟ್/ಮ್ಯೂಟ್ ಹೇಳಿದರು. ಅವನ್ನೆಲ್ಲ ಸರಿ ಮಾಡುವುದಕ್ಕಾಗಿ ಬಿಡುಗಡೆ ವಿಳಂಬವಾಯಿತು ಎಂದಿದ್ದಾರೆ ನಿರ್ದೇಶಕ ರಜತ್. ಐವರು ಕ್ರಿಮಿನಲ್ಸ್ ಮಾಡಬಾರದ ಕೆಲಸ ಮಾಡಿ ತಲೆಮರೆಸಿಕೊಳ್ಳುತ್ತಾರೆ. ಅವರನ್ನು ಹುಡುಕಲು ಪೊಲೀಸರು ಮಾಡುವ ಬೇಟೆಯೇ ಚಿತ್ರದ ಕಥೆಯಂತೆ.