ದುನಿಯಾ ವಿಜಯ್ ಸದ್ಯಕ್ಕೆ ಭೀಮಾ ಚಿತ್ರದ ನಟನೆ, ನಿರ್ದೇಶನದಲ್ಲಿ ಬ್ಯುಸಿಯಾಗಿ ಹೋಗಿದ್ದಾರೆ. ಜಗದೀಶ್ ಗೌಡ ಮತ್ತು ಕೃಷ್ಣ ಕಾರ್ತಿಕ್ ನಿರ್ಮಾಣದ ಭೀಮ ಚಿತ್ರದ ಶೂಟಿಂಗ್ ಮುಕ್ತಾಯದ ಹಂತದಲ್ಲಿದೆ. ಜೊತೆಯಲ್ಲೇ ಬಾಲಕೃಷ್ಣ ನಟಿಸಿರುವ ತೆಲುಗು ಚಿತ್ರ ವೀರಸಿಂಹರೆಡ್ಡಿಯಲ್ಲಿ ವಿಲನ್ ರೋಲ್. ಗೋಪಿಚಂದ್ ಮಲ್ಲಿನೇನಿ ನಿರ್ದೇಶನದ ವೀರಸಿಂಹರೆಡ್ಡಿ ರಿಲೀಸ್ ಆಗುವುದಕ್ಕೆ ಸಿದ್ಧವಾಗುತ್ತಿದೆ. ಇದರ ಮಧ್ಯೆ ಹಂಪಿಯ ಜೊತೆ ಮಾತುಕತೆ ನಡೆಯುತ್ತಿದೆ.
ಜಡೇಶ್ ಕುಮಾರ್ ಹಂಪಿ. ಜೆಂಟಲ್ಮನ್ ಮತ್ತು ಗುರು ಶಿಷ್ಯರು ಚಿತ್ರಗಳ ಮೂಲಕ ಪ್ರತಿಭಾವಂತ ನಿರ್ದೇಶಕ ಎಂದು ಗುರುತಿಸಿಕೊಂಡಿರೋ ಡೈರೆಕ್ಟರ್. ಗುರು ಶಿಷ್ಯರು ಮೂಲಕ ಕಮರ್ಷಿಯಲ್ ಆಗಿಯೂ ಸಕ್ಸಸ್ ಕಂಡ ಹಂಪಿ, ಈಗ ದುನಿಯಾ ವಿಜಯ್ ಅವರಿಗೆ ಕಥೆ ಹೇಳಿದ್ದಾರೆ. ಕಥೆಗೆ ಓಕೆ ಎಂದಿರೋ ವಿಜಯ್ ಈಗಾಗಲೇ ಎರಡು ರೌಂಡ್ ಮಾತುಕತೆ ನಡೆಸಿದ್ದಾರೆ. ಸದ್ಯಕ್ಕೆ ತೆಲುಗಿನ ವೀರಸಿಂಹರೆಡ್ಡಿ ಚಿತ್ರದ ಕೆಲಸ ಮತ್ತು ಪ್ರಚಾರಕ್ಕೆ ಹೋಗಿರುವ ವಿಜಯ್, ಹಿಂದಿರುಗಿದ ನಂತರ ಹಂಪಿ ಜೊತಿಗಿನ ಮಾತುಕತೆಯೂ ಮುಂದುವರೆಯಲಿದೆ.