ಕನ್ನಡಿಗರ ಕುಳ್ಳ, 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ ನಿರ್ಮಾಪಕ, ನಟ, ನಿರ್ದೇಶಕ ದ್ವಾರಕೀಶ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 57ನೇ ಘಟಿಕೋತ್ಸವ ಅದ್ದೂರಿಯಾಗಿ ನಡೆದಿದ್ದು, ಜ್ಞಾನಜ್ಯೋತಿ ಆಡಿಟೋರಿಯಂ ನಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾಲಯದ ಅನುದಾನ ಆಯೋಗದ ಅಧ್ಯಕ್ಷ ಪ್ರೊ.ಎಂ.ಜಗದೀಶ್, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಭಾಗವಹಿಸಿದ್ರು. ಘಟಿಕೋತ್ಸವದಲ್ಲಿ ಚಿತ್ರ ನಟ ದ್ವಾರಕೀಶ್, ಖ್ಯಾತ ಕಲಾವಿದ ಅಮರನಾಥ್ ಗೌಡ, ಸಮಾಜ ಸೇವಕ ಡಾ.ಟಿ. ಅನಿಲ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ದ್ವಾರಕೀಶ್ ನಟರಾಗಿ, ನಿರ್ದೇಶಕರಾಗಿ ನಿರ್ಮಾಪಕರಾಗಿ ಗೆದ್ದವರು. ಡಾ.ರಾಜ್ ಅವರ ಮೇಯರ್ ಮುತ್ತಣ್ಣ ಚಿತ್ರದ ಮೂಲಕ ಪರಿಪೂರ್ಣ ನಿರ್ಮಾಪಕರಾದ ದ್ವಾರಕೀಶ್, ನೀ ಬರೆದ ಕಾದಂಬರಿ ಮೂಲಕ ನಿರ್ದೇಶಕರಾಗಿಯೂ ಗೆದ್ದರು. ಕುಳ್ಳ ಏಜೆಂಟ್ 000 ಮೂಲಕ ಹೀರೋ ಆಗಿಯೂ ಗೆದ್ದು ಸ್ಟಾರ್ ಆದರು. ವಿಷ್ಣುವರ್ಧನ್-ದ್ವಾರಕೀಶ್ ಜೋಡಿಯ ಚಿತ್ರಗಳು ಕಳ್ಳ-ಕುಳ್ಳ ಜೋಡಿಯೆಂದೇ ಫೇಮಸ್. ವಿದೇಶದಲ್ಲಿ ಶೂಟಿಂಗ್ ಮಾಡಿದ ಮೊದಲ ಸಿನಿಮಾ ದ್ವಾರಕೀಶ್ ಅವರದ್ದು. ಸಂಪೂರ್ಣವಾಗಿ ವಿದೇಶದಲ್ಲಿ ಚಿತ್ರೀಕರಿಸಿ ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ಮಾಡಿದ್ದ ದ್ವಾರಕೀಶ್, ಕನ್ನಡಕ್ಕೆ ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸಿದವರು. ಭವ್ಯಾ, ವಿನೋದ್ ರಾಜ್, ಶೃತಿ ಇವರು ಕನ್ನಡ ಚಿತ್ರರಂಗಕ್ಕೆ ಕರೆತಂದ ಪ್ರತಿಭೆಗಳು. ಕನ್ನದಲ್ಲಿ ರಾಜ್, ವಿಷ್ಣು, ಅಂಬರೀಷ್, ಶ್ರೀನಾಥ್, ಶಂಕರ್ ನಾಗ್, ರಜನಿಕಾಂತ್.. ಇವರಿಗೆಲ್ಲ ಸಿನಿಮಾ ಮಾಡಿದ ಸ್ಟಾರ್ ನಿರ್ಮಾಪಕ ದ್ವಾರಕೀಶ್. ಗಾಯಕ ಕಿಶೋರ್ ಕುಮಾರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ತಂದವರೂ ಕೂಡಾ ದ್ವಾರಕೀಶ್. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ದ್ವಾರಕೀಶ್ ನರಸಿಂಹ ರಾಜು ಅವರನ್ನು ಬಿಟ್ಟರೆ ಕಾಮಿಡಿ ಪಾತ್ರಗಳಿಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ನಟ. ಈಗ ಡಾಕ್ಟರ್ ದ್ವಾರಕೀಶ್ ಆಗಿದ್ದಾರ