ಅಭಿಷೇಕ್ ಅಂಬರೀಷ್ ನಟಿಸುತ್ತಿರ ದುನಿಯಾ ಸೂರಿ ನಿರ್ದೇಶನದ ಸಿನಿಮಾ ಬ್ಯಾಡ್ ಮ್ಯಾನರ್ಸ್. ಇದೇ ಮಒದಲ ಬಾರಿಗೆ ಸೂರಿ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದ ಅಭಿಷೇಕ್, ಸೂರಿ ಚಿತ್ರದಲ್ಲಿ ರಫ್ & ಟಫ್ ಕಾಪ್ ಆಗಿದ್ದಾರೆ. ಹೆಸರು ರುದ್ರ. ಪ್ರಿಯಾಂಕಾ ಕುಮಾರ್ ಚಿತ್ರದ ಇನ್ನೊಬ್ಬ ನಾಯಕಿ. ಅಭಿಷೇಕ್ ಈ ಚಿತ್ರದೊಂದಿಗೆ ಭರ್ಜರಿ ಗೆಲುವಿನ ಕನಸು ಕಾಣುತ್ತಿದ್ದು, ಚಿತ್ರದ ಚಿತ್ರೀಕರಣ ಈಗ ಮುಕ್ತಾಯವಾಗಿದೆ.
ಸುಧೀರ್ ಕೆ.ಎಂ. ನಿರ್ಮಾಣದ ಚಿತ್ರ ಫೆಬ್ರವರಿ 16ಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸೂರಿ ಚಿತ್ರಕ್ಕೆ ಮಾಸ್ತಿ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು ಟಗರು ಮ್ಯಾಜಿಕ್ ರಿಪೀಟ್ ಆಗುವ ನಿರೀಕ್ಷೆ ಚಿತ್ರತಂಡದಲ್ಲಿದೆ. ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ಮೊದಲಾದ ಅನುಭವಿ ಕಲಾವಿದರೂ ಚಿತ್ರದಲ್ಲಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಜೊತೆಗೆ ಸೂರಿಯ ರಾ ಸ್ಟೈಲ್ ಮೇಕಿಂಗ್, ಕತ್ತಲು ಬೆಳಕಿನ ಆಟ, ಚಿತ್ರ ವಿಚಿತ್ರ ಪಾತ್ರಗಳು, ಕ್ರೌರ್ಯದ ಜೊತೆ ಜೊತೆಯಲ್ಲೇ ಪ್ರೀತಿಯ ಸೆಳಕು ನೀಡುವ ಸೂರಿ ಸ್ಟೈಲ್ ವಿಜೃಂಭಿಸಲಿದೆ.