ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಸೆನ್ಸೇಷನ್ ಯು&ಐ ಚಿತ್ರಕ್ಕೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಆಯ್ಕೆಯಾಗಿದ್ದಾರೆ. ಏಕ್ ಲವ್ ಯಾ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ರೀಷ್ಮಾಗೆ ಇದು ಬಂಪರ್ ಪ್ರೈಜ್. ಮೊದಲ ಚಿತ್ರದಲ್ಲೇ ಏಕ್ ಲವ್ ಯಾದಲ್ಲಿ ಜೋಗಿ ಪ್ರೇಮ್ ಜೊತೆ ಕೆಲಸ ಮಾಡಿದ್ದ ರೀಷ್ಮಾ ನಾಣಯ್ಯ, ಅದಾದ ಮೇಲೆ ರಾಣ ಚಿತ್ರದಲ್ಲಿ ನಟಿಸಿದ್ದರು. ಈಗ ಗೋಲ್ಡನ್ ಸ್ಟಾರ್ ಜೊತೆ ಬಾನ ದಾರಿಯಲ್ಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಯಲ್ಲೇ ರೀಷ್ಮಾ ನಾಣಯ್ಯಗೆ ಉಪ್ಪಿಗೆ ನಾಯಕಿಯಾಗುವ ಅವಕಾಶ ಒದಗಿ ಬಂದಿದೆ.
ಉಪೇಂದ್ರ ಹೀರೋ ಆಗಿರುವ ಚಿತ್ರ ಎಂದಷ್ಟೇ ಅಲ್ಲ, ಅವರೇ ನಿರ್ದೇಶಕರಾಗಿರುವುದೂ ರೀಷ್ಮಾಗೆ ಪ್ಲಸ್ ಪಾಯಿಂಟ್. ಜೊತೆಗೆ ಲಹರಿ ಮನೋಹರ್, ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರ. ದೊಡ್ಡ ಬ್ಯಾನರ್. ಉಪ್ಪಿ ಚಿತ್ರದಲ್ಲಿ ನಟನೆಗೂ ಭರಪೂರ ಅವಕಾಶವಿರುತ್ತದೆ.