ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಶುರುವಾದಾಗಲೇ ಚಿತ್ರತಂಡ ಇದು ರೆಗ್ಯುಲರ್ ಸ್ಟೋರಿ ಆಗಿರಲ್ಲ ಅನ್ನೋ ಸುಳಿವು ಕೊಟ್ಟಿತ್ತು. ಟೈಟಲ್ಲೇ ಸಂಥಿಂಗ್ ಸ್ಪೆಷಲ್ ಎನ್ನುವ ಕುತೂಹಲ ಮೂಡಿಸಿತ್ತು. ಡಾಲಿ ಧನಂಜಯ, ಆದಿತಿ ಪ್ರಭುದೇವ ಲೀಡ್ ರೋಲ್‍ನಲ್ಲಿರೋ ಸಿನಿಮಾದ ವಿಶೇಷತೆಗಳ ಬಗ್ಗೆ ಝಲಕ್ ಮಾತ್ರವೇ ಸಿಕ್ಕಿತ್ತು. ಈಗ ಟೀಸರ್ ಹೊರಬಿದ್ದಿದೆ. ಕುತೂಹಲಕ್ಕೆ ಕಿರೀಟವಿಟ್ಟಂತೆ ಇನ್ನಷ್ಟು ಬೆರಗು ಹುಟ್ಟಿಸಿದೆ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಟೀಸರ್.
ಟೀಸರ್‍ನ ಮೊದಲ ದೃಶ್ಯದಲ್ಲಿಯೇ ಡಾಲಿ ಜೈಲಿಗೆ ಎಂಟ್ರಿ ಕೊಡುತ್ತಾರೆ. ರಗಡ್ ಲುಕ್. ಆದರೆ.. ಆತ ಮಗುವಿನ ಜೊತೆ, ಆದಿತಿಯ ಜೊತೆ ನಗುನಗುತ್ತಾ ಇರುವ ದೃಶ್ಯಗಳು ಕಥೆ ಬೇರೆಯೇ ಇದೆ ಎಂದು ಸಾರಿ ಹೇಳುತ್ತವೆ. ಯಶಾ ಶೆಟ್ಟಿ, ಭಾವನಾ ರಾಮಣ್ಣ. ಪ್ರಕಾಶ್ ಬೆಳವಾಡಿ, ಮಯೂರಿ ನಟರಾಜ್ ಅಷ್ಟೇ ಅಲ್ಲ, ಪ್ರಾಣ್ಯ ಪಿ ರಾವ್ ಕೂಡಾ ಬೆರಗು ಹುಟ್ಟಿಸುತ್ತಾರೆ. ಕಥೆ ಬೇರೆಯದೇ ಇದೆ. ಟೀಸರ್‍ನ ಕೊನೆಯ ಸೀನ್‍ನಲ್ಲಿ ಆದಿತಿ ಪ್ರಭುದೇವ ಸಿಗರೇಟು ಸೇದುತ್ತಾ ಕೂರುತ್ತಾರೆ. ಏನಿದು.. ಯಾಕೆ.. ಡಿಸೆಂಬರ್ 30ಕ್ಕೆ ರಿಲೀಸ್ ಆಗುತ್ತಿರೋ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಚಿತ್ರಕ್ಕೆ ಕುಶಾಲ್ ಗೌಡ ನಿರ್ದೇಶಕ. ಶ್ರೀಹರಿ ನಿರ್ಮಾಣದ ಸಿನಿಮಾ ವರ್ಷದ ಕೊನೆಗೆ ಬಿಡುಗಡೆಯಾಗುತ್ತಿದೆ.