ಹರಿಪ್ರಿಯಾ ಕನ್ನಡ ಚಿತ್ರರಂಗದ ಸ್ಟಾರ್ ನಟಿ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತರಾಗಿರುವ ಹರಿಪ್ರಿಯಾ ಈ ಚಿಕ್ಕಬಳ್ಳಾಪುರದ ಚೆಲುವೆಗೆ ಈಗ 31 ವರ್ಷ. 2007ರಲ್ಲಿ ಚಿತ್ರರಂಗಕ್ಕೆ ಬಂದಿರೋ ಹರಿಪ್ರಿಯಾ ಕನ್ನಡದ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿದ್ದಾರೆ. ಕಮರ್ಷಿಯಲ್ ಮತ್ತು ಪ್ರಯೋಗಾತ್ಮಕ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಈಗಲೂ ಕೈಲಿ ಐದಾರು ಚಿತ್ರಗಳಿವೆ.
ಇನ್ನು ವಸಿಷ್ಠ ಸಿಂಹ. ಗಾಯಕನಾಗಬೇಕೆಂದು ಬಂದು ವಿಲನ್ ಆಗಿ, ತಮ್ಮದೇ ಛಾಪು ಮೂಡಿಸಿ ಈಗ ಹೀರೋ ಆಗುತ್ತಿರುವ ಚೆಲುವ. ಮೈಸೂರು ಹುಡುಗ. ಇವರಿಬ್ಬರಿಗೂ ಪ್ರೀತಿಯಾಗಿದೆಯಂತೆ. ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಂತೆ ಎಂಬ ಸುದ್ದಿ ಕರ್ನಾಟಕದಾದ್ಯಂತ ಹಬ್ಬಿದೆ.
ಅದೆಲ್ಲವೂ ಶುರುವಾಗಿದ್ದು ಒಂದು ಮೂಗುತಿ ಪ್ರಕರಣದಿಂದ. ಇತ್ತೀಚೆಗೆ ಹರಿಪ್ರಿಯಾ ಮೂಗುತಿ ಚುಚ್ಚಿಸಿಕೊಂಡಿದ್ದರು. ಒಂದು ಸಿನಿಮಾಗಾಗಿ ಮೂಗು ಚುಚ್ಚಿಸಿಕೊಂಡಿದ್ದಾರೆ ಎಂದುಕೊಂಡಿದ್ದವರೇ ಎಲ್ಲ. ಆದರೆ ಆ ವಿಡಿಯೋದಲ್ಲಿ ಹರಿಪ್ರಿಯಾ ಜೊತೆ ವಸಿಷ್ಠ ಸಿಂಹ ಇದ್ದುದ್ದನ್ನೂ ಗುರುತಿಸಿಬಿಟ್ಟರು. ಅದಕ್ಕೆ ತಕ್ಕಂತೆ ನಾಲ್ಕು ವಾರಗಳ ಹಿಂದೆ ವಸಿಷ್ಠ ಸಿಂಹ ತಾವು ಮತ್ತು ಹರಿಪ್ರಿಯಾ ಅವರಿರುವ ವಿಡಿಯೋ ಪೋಸ್ಟ್ ಮಾಡಿ ಹರಿಪ್ರಿಯಾ ನಿಮಗೆ ಎಲ್ಲದರಲ್ಲೂ ಅತ್ಯುತ್ತಮವಾದುದನ್ನೇ ಬಯಸುತ್ತೇನೆ. ಸಂಗಾತಿಯೂ ಸೇರಿದಂತೆ ನಿಮಗೆ ಹೆಚ್ಚಿನ ಸಂತೋಷ ಮತ್ತು ಪ್ರೀತಿಯು ದೊರೆಯಲಿ.. ನೀನು ನೀನಾಗಿರುವದಕ್ಕೆ ಧನ್ಯವಾದಗಳು ಎಂದು ಒಂದು ಪೋಸ್ಟ್ ಹಾಕಿದ್ದರು. ಕೆದಕುವುದಕ್ಕೆ ಶುರು ಮಾಡಿದಾಗ ಸಿಕ್ಕಿರೋದು ಕೇವಲ ಗಾಳಿಮಾತುಗಳ ಸುರಿಮಳೆ.
ಚಿತ್ರವೊಂದರ ಸೆಟ್ಟಿನಲ್ಲಿ ಪರಸ್ಪರ ಭೇಟಿಯಾದಾಗ ಇಬ್ಬರಿಗೂ ಲವ್ ಅಟ್ ಫಸ್ಟ್ ಸೈಟ್ ಆಗಿದೆ. ಕ್ರಮೇಣ ಪರಿಚಯವಾಗಿ ಪ್ರೀತಿಯಾಗಿದೆ. ಇಬ್ಬರೂ ಇತ್ತೀಚೆಗೆ ದುಬೈನಲ್ಲಿ ಒಂದು ರೌಂಡ್ ಮದುವೆ ಶಾಪಿಂಗ್ ಕೂಡಾ ಮುಗಿಸಿದ್ದಾರೆ. ಶೀಘ್ರದಲ್ಲೇ ಎಂಗೇಜ್ಮೆಂಟ್ ಕೂಡಾ ನಡೆಯಲಿದೆ ಎಂಬ ಸುದ್ದಿಗಳು ಜೋರಾದವು. ಹರಿಪ್ರಿಯಾ ಆಗಲಿ, ವಸಿಷ್ಠ ಸಿಂಹ ಅವರಾಗಲೀ.. ಅಥವಾ ಅವರಿಬ್ಬರ ಬಗ್ಗೆ ಸಕಲವನ್ನೂ ತಿಳಿದುಕೊಂಡಿರುವ ಕ್ಲೋಸ್ ಫ್ರೆಂಡ್ಸ್ ಆಗಲೀ.. ಈ ಬಗ್ಗೆ ತುಟಿಗೆ ಬೀಗ ಹಾಕಿಕೊಂಡಿದ್ದಾರೆ. ದಿನವೆಲ್ಲ ಸುದ್ದಿಯಾದರೂ ಇಬ್ಬರೂ ಒಂದು ರಿಯಾಕ್ಷನ್ ಕೂಡಾ ಕೊಟ್ಟಿಲ್ಲ. ಅದರ ಅರ್ಥ ಪ್ರೀತಿ ಮತ್ತು ಮದುವೆ ಸುದ್ದಿ ನಿಜವಿದ್ದರೂ ಇರಬಹುದು ಎನ್ನಿಸಬಹುದು. ಆದರೆ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಖುದ್ದು ಪ್ರತಿಕ್ರಿಯೆ ನೀಡಿ, ಸ್ಪಷ್ಟನೆ ನೀಡುವವರೆಗೆ ಇದು ಕೇವಲ ಗಾಸಿಪ್.