ಸೋಲೇ ಇಲ್ಲ.. ನಿನ್ನ ಹಾಡು ಹಾಡುವಾಗ.. 1889ರ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ರವಿಚಂದ್ರನ್ ಅಭಿನಯದ ಯುದ್ಧಕಾಂಡ ಕೆ.ವಿ.ರಾಜು ಅವರ ಚಿತ್ರ. ಈಗ ಮತ್ತೊಮ್ಮೆ ಯುದ್ಧಕಾಂಡ ಬರುತ್ತಿದೆ. ಒನ್ಸ್ ಎಗೇಯ್ನ್ ಈ ಚಿತ್ರದಲ್ಲಿಯೂ ಹೀರೋ ಲಾಯರ್. ಹೀರೋ ರವಿಚಂದ್ರನ್ ಅಲ್ಲ, ಅಜಯ್ ರಾವ್.
ಇದು ಕೋರ್ಟ್ ರೂಂ ಡ್ರಾಮಾ. ಅಜಯ್ ರಾವ್ ಲಾಯರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಂಟರ್ಟೈನರ್ ಸಿನಿಮಾ. ಯುದ್ಧಕಾಂಡ ಅನ್ನೋ ಟೈಟಲ್ ಕಥೆಗೆ ಸೂಕ್ತವಾಗಿದೆ. ಸಿನಿಮಾ ನೋಡಿದವರಿಗೆ ಯಾಕೆ ಈ ಚಿತ್ರಕ್ಕೆ ಯುದ್ಧಕಾಂಡ ಅನ್ನೋ ಟೈಟಲ್ ಇಟ್ಟೆವು ಅನ್ನೋದು ಅರ್ಥವಾಗುತ್ತೆ. ಆದರೆ 1989ರ ಯುದ್ಧಕಾಂಡ ಚಿತ್ರಕ್ಕೂ, ಈ ಯುದ್ಧಕಾಂಡಕ್ಕೂ ಯಾವ ಸಂಬಂಧವೂ ಇಲ್ಲ ಎಂದಿದ್ದಾರೆ ನಿರ್ದೇಶಕ ಪವನ್ ಭಟ್.
ಪವನ್ ಭಟ್ ಅವರಿಗೆ ಇದು 2ನೇ ಸಿನಿಮಾ. ಈ ಹಿಂದೆ ಕಟ್ಟಿಂಗ್ ಶಾಪ್ ಅನ್ನೋ ಸಿನಿಮಾ ಮಾಡಿದ್ದರು. ಚಿತ್ರದಲ್ಲಿ ಲಾಯರ್ ಪಾತ್ರಧಾರಿ ಒಂದು ಇಷ್ಯೂಗೆ ಸಂಬಂಧಪಟ್ಟಂತೆ ವಾದ ಮಾಡುತ್ತಾನೆ. ಆ ಇಷ್ಯೂ ಯಾವುದು ಅನ್ನೋದನ್ನು ಸದ್ಯಕ್ಕೆ ಹೇಳೋ ಹಾಗಿಲ್ಲ ಎಂದಿದ್ದಾರೆ ಪವನ್ ಭಟ್. ಅಜಯ್ ರಾವ್ ಸದ್ಯಕ್ಕೆ ಮಂಜು ಸ್ವರಾಜ್ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಆ ಚಿತ್ರ ಮುಗಿದ ನಂತರ ಈ ಚಿತ್ರ ಸೆಟ್ಟೇರಲಿದೆ.