ಕಿರುತೆರೆ ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಸುದ್ದಿಗೆ ಬ್ರೇಕ್ ಬಿದ್ದಿದೆ. ಇತ್ತೀಚೆಗೆ ವೈಷ್ಣವಿ ಗೌಡ ಅವರ ಎಂಗೇಜ್ಮೆಂಟ್ ಫೋಟೋಗಳು ವೈರಲ್ ಆಗಿದ್ದವು. ವೈಷ್ಣವಿ ಅವರ ತಂದೆ ರವಿಕುಮಾರ್, ತಾಯಿ ಭಾನು, ಅಣ್ಣ ಸುನಿಲ್ ಕುಮಾರ್, ಕರ್ನಾಟಕದ ನಿವೃತ್ತ ಡಿಜಿಪಿ ಶಂಕರ್ ಬಿದರಿ ಇದ್ದ ಫೋಟೋ ಅದು. ವೈಷ್ಣವಿ ಗೌಡ ಹಾಗೂ ವಿದ್ಯಾಭರಣ ಎಂಬುವವರು ಹಾರ ಹಾಕಿಕೊಂಡಿರುವ ಫೋಟೋ ನೋಡಿದವರು ನಿಶ್ಚಿತಾರ್ಥವೆಂದೇ ಭ್ರಮಿಸಿದ್ದರು. ವಿದ್ಯಾಭರಣ ಕೂಡಾ 2018ರಲ್ಲಿ ವಿರಾಜ್ ಎಂಬ ಸಿನಿಮಾ ಹೀರೋ ಆಗಿದ್ದವರು. ಆದರೆ ಬ್ಯುಸಿನೆಸ್ ಮ್ಯಾನ್. ಇನ್ನೇನು ಅಗ್ನಿಸಾಕ್ಷಿ ನಾಯಕಿ ಅಗ್ನಿಸಾಕ್ಷಿಯಾಗಿ ವಿವಾಹವಾಗುವ ಸಮಯ ಎಂದುಕೊಂಡಿರುವಾಗಲೇ ನಿಶ್ಚಿತಾರ್ಥ ಮುರಿದು ಬಿದ್ದಿದೆ.
ನಿಶ್ಚಿತಾರ್ಥವಾದ ಮೇಲೆ ಅನಾಮಿಕ ಹುಡುಗಿಯೊಬ್ಬಳು ವಿದ್ಯಾಭರಣ ಕ್ಯಾರೆಕ್ಟರ್ ಸರಿ ಇಲ್ಲ ಎಂದು ಹೇಳಿರೋ ಆಡಿಯೋ ವೈರಲ್ ಆಗಿತ್ತು.
ಇನ್ನು ಈ ಮಾತು ಬೆಳೆಸೋದು ಬೇಡ. ನಾನು ಹಾಗೂ ನನ್ನ ಕುಟುಂಬ ಇದನ್ನು ಇಲ್ಲಿಗೇ ಬಿಡುತ್ತಿದ್ದೇವೆ. ಮೊದಲಿಗೇ ಗೊತ್ತಾಗಿದ್ದು ಒಳ್ಳೆಯದಾಯ್ತು.ಒಂದು ವೇಳೆ ಮದುವೆ ಆದ್ಮೇಲೆ ಗೊತ್ತಾದ್ರೆ ಕಷ್ಟ ಆಗ್ತಿತ್ತು. ಎನ್ನುವ ಮೂಲಕ ನಿಶ್ಚಿತಾರ್ಥಕ್ಕೆ ತೆರೆ ಎಳೆದಿದ್ದಾರೆ. ವಿದ್ಯಾಭರಣ ಕೂಡಾ ಪ್ರತಿಕ್ರಿಯೆ ನೀಡಿದ್ದು ಇದು ಒಂದು ಸಂಚು. ವೈಷ್ಣವಿ ಗೌಡ ಮದುವೆಯಾಗುತ್ತೋ ಬಿಡುತ್ತಾರೋ.. ಗೊತ್ತಿಲ್ಲ. ಆದರೆ ನಾನು ಕೆಟ್ಟ ವ್ಯಕ್ತಿಯಂತೂ ಅಲ್ಲ. ಇದರ ಬಗ್ಗೆ ಪೊಲೀಸ್ ದೂರು ಕೊಡುತ್ತೇನೆ ಎಂದಿದ್ದಾರೆ.