ರೇಮೋ. ಈ ಚಿತ್ರದಲ್ಲಿ ಇಶಾನ್ ರಾಕ್ ಸ್ಟಾರ್. ಒಬ್ಬ ಸಾಮಾನ್ಯ ಹುಡುಗ ರಾಕ್ ಸ್ಟಾರ್ ಆಗುವುದೇ ಒಂದು ಮ್ಯಾಜಿಕ್. ನಿರ್ದೇಶಕ ಪವನ್ ಅವರು ಈ ಪಾತ್ರಕ್ಕೆ ಯಾವುದೇ ರೆಫರೆನ್ಸ್ ಇಟ್ಟುಕೊಳ್ಳಬೇಡಿ. ನಾವು ಮಾಡಿದ್ದೇ ಸ್ಟೈಲ್ ಆಗಬೇಕು. ಯಾರನ್ನೂ ಅನುಕರಿಸಬೇಡಿ ಎಂದು ಹೇಳಿದ್ದರು. ಆದರೂ ನಾನು ಇಂಡಿಯನ್ ರಾಕ್ ಸ್ಟಾರ್ಸ್ ಸಿನಿಮಾ ನೋಡಿದೆ. ಆದರೆ ಖಂಡಿತವಾಗಿ ಯಾರನ್ನೂ ಅನುಕರಣೆ ಮಾಡಿಲ್ಲ ಎನ್ನುತ್ತಾರೆ ಇಶಾನ್.
ಶೂಟಿಂಗ್ ಶುರುವಾದ ಕೆಲವು ದಿನಗಳ ನಂತರ ಪವನ್ ಒಡೆಯರ್ ನನಗೆ ರಾಕ್ ಸ್ಟಾರ್ ಸಿಕ್ಕಾಯ್ತು ಎಂದಿದ್ದರು. ಡೈರೆಕ್ಟರ್ ಎದುರು ನಾನು ಗೆದ್ದಿದ್ದೆ. ಚಿತ್ರದ ಸ್ಕ್ರಿಪ್ಟ್ ಹಂತದಲ್ಲಿ ಜೊತೆಯಲ್ಲೇ ಇದ್ದೆ. ಹೀಗಾಗಿ ಪಾತ್ರ ಅರ್ಥ ಮಾಡಿಕೊಳ್ಳೋದು ನನಗೆ ಕಷ್ಟ ಆಗಲಿಲ್ಲ ಎಂದಿದ್ದಾರೆ ಇಶಾನ್. ಡೈರೆಕ್ಟರ್ ಹೇಳಿ ಆಕ್ಟಿಂಗ್ ಮಾಡಿಸುತ್ತಾರೆ. ಆದರೆ ನಟಿಸೋದು ನಾವೇ ಅಲ್ಲವೇ. ಪಾತ್ರದ ಮ್ಯಾನರಿಸಂ, ಎಮೋಷನ್, ಎನರ್ಜಿ ಎಲ್ಲವನ್ನೂ ಕೊಡಬೇಕಾದವರು ನಾವೇ. ಅದು ನಿರ್ದೇಶಕರಿಗೆ ಮೊದಲು ಇಷ್ಟವಾಗಬೇಕು. ನಂತರ ಪ್ರೇಕ್ಷಕರಿಗೆ ಇಷ್ಟವಾಗಬೇಕು ನನಗಂತೂ ಈ ಸಿನಿಮಾ ಟರ್ನಿಂಗ್ ಪಾಯಿಂಟ್ ಆಗುತ್ತೆ ಅನ್ನೋ ನಂಬಿಕೆ ಇದೆ ಎನ್ನುವ ವಿಶ್ವಾಸ ಇಶಾನ್ ಮಾತುಗಳಲ್ಲಿದೆ. ಪವನ್ ಒಡೆಯರ್ ನಿರ್ದೇಶನದ ರೇಮೋನಲ್ಲಿ ಇಶಾನ್ಗೆ ಆಶಿಕಾ ರಂಗನಾಥ್ ನಾಯಕಿ. ಸಿ.ಆರ್.ಮನೋಹರ್ ನಿರ್ಮಾಣದ ರೇಮೋ ಈಗ ಥಿಯೇಟರಲ್ಲಿದೆ.