ರೇಮೋ. ನಾಳೆ ರಿಲೀಸ್ ಆಗುತ್ತಿರುವ ಮ್ಯೂಸಿಕಲ್ ಲವ್ ಸ್ಟೋರಿ. ಇಶಾನ್ ಹೀರೋ ಆಗಿರೋ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿ. ಇಶಾನ್ ರೇವಂತ್ ಅನ್ನೋ ಸಿಂಗರ್ ಪಾತ್ರ ಮಾಡುತ್ತಿದ್ದರೆ, ಆಶಿಕಾ ಮೋಹನ ಅನ್ನೋ ಟ್ರೆಡಿಷನಲ್ ಹುಡುಗಿಯಾಗಿ, ಸಿಂಗರ್ ಆಗಿ ಕಂಗೊಳಿಸಿದ್ದಾರೆ. ಎರಡು ಹೃದಯಗಳ ನಡುವಿನ ಈಗೋ, ಪ್ರೀತಿ, ದ್ವೇಷಗಳ ಮಧ್ಯೆ ಸಂಗೀತ ಹೊನಲು ಹೊನಲಾಗಿ ಹರಿಯುತ್ತದೆ. ಇದೆಲ್ಲವನ್ನೂ ಕಥೆಯಾಗಿ ಕಟ್ಟಿ ಹೇಳುತ್ತಿರೋದು ಪವನ್ ಒಡೆಯರ್. ನಿರ್ಮಾಪಕ ಸಿ.ಆರ್.ಮನೋಹರ್. ಆದರೆ ಇವರೆಲ್ಲರನ್ನೂ ಮೀರಿದ ಇನ್ನೊಬ್ಬ ಹೀರೋ ಚಿತ್ರದಲ್ಲಿದ್ದಾರೆ. ಅದು ಬೇರ್ಯಾರು ಅಲ್ಲ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.
ರೇಮೋಫೇಮೋ.. ಹಾಡು ಪಾರ್ಟಿಗಳಿಗೆ, ಕ್ರೇಜ್‍ಗೆ ಹೇಳಿ ಮಾಡಿಸಿದಂತಿದೆ. ಕನ್ನಡಕ್ಕೆ ಹೊಸದೆನ್ನಿಸುವ ಹಾಡು ಕೊಡುವ ಕಿಕ್ಕು ಬೇರೆಯದೇ ಇದೆ.
ಹೋದರೆ ಹೋಗು.. ಯಾರಿಗೆ ಬೇಕು.. ಹಾಡು ಭಗ್ನಪ್ರೇಮಿಗಳ ಹೃದಯಗೀತೆಯಾಗುವ ಎಲ್ಲ ಅರ್ಹತೆಗಳನ್ನೂ ಹೊಂದಿದೆ. ಇದು ಲೇಡಿಸ್ ಭಗ್ನಪ್ರೇಮಿಗಳಿಗಾಗಿ..
ನಿನದೇ ನಿನದೇ ಹಾಡಂತೂ.. ಕ್ಲಾಸಿಕಲ್ ಮತ್ತು ರ್ಯಾಪ್ ಎರಡನ್ನೂ ಮಿಕ್ಸ್ ಮಾಡಿರುವ ಹಾಡು. ಶಾಸ್ತ್ರೀಯ ಸಂಗೀತದಲ್ಲಿ ರ್ಯಾಪ್ ಸಾಂಗ್ ಮಾಡೋದು ಸಾಧ್ಯವೇ ಎಂದು ಅಚ್ಚರಿ ಹುಟ್ಟಿಸುತ್ತದೆ.
ತೆರೆಯೋ ಕೋಟಿ.. ಚಂದಿರ ಒಂಟಿ.. ಇದು ಯುವ ಪುರುಷ ಭಗ್ನಪ್ರೇಮಿಗಳಿಗಾಗಿ..
ಚೆಂದದ ಹಾಡುಗಳ ಮೂಲಕವೇ ಕಥೆ ಹೇಳೋದು ಪವನ್ ಒಡೆಯರ್ ಸ್ಟೈಲ್. ಹಾಡುಗಳನ್ನು ಚೆಂದ ಚೆಂದವಾಗಿ ಕಟ್ಟಿ ಕಒಟ್ಟಿದ್ದಾರೆ ಪವನ್ ಒಡೆಯರ್. ಇಶಾನ್-ಆಶಿಕಾ ರಂಗನಾಥ್ ಮುದ್ದು ಮುದ್ದು ಮುಖದಲ್ಲಿ ಭಾವನೆಗಳನ್ನೂ ಹೊರಹಾಕಿದ್ದಾರೆ. ಸಿನಿಮಾ ನಾಳೆ ರಿಲೀಸ್.