ಟಗರು. ಡಾಲಿ ಧನಂಜಯ್ ವೃತ್ತಿ ಜೀವನದ ಮಹತ್ವದ ಸಿನಿಮಾ. ಧನಂಜಯ್ ಅವರಿಗೆ ಡಾಲಿ ಅನ್ನೋ ಐಡೆಂಟಿಟಿ ಕೊಟ್ಟಿದ್ದೇ ಟಗರು ಚಿತ್ರದ ಡಾಲಿ ಪಾತ್ರ. ಈಗ ಡಾಲಿ ಟಗರು ಪಲ್ಯ ಮಾಡುತ್ತಿದ್ದಾರೆ. ಅದು ಕೇವಲ ನಿರ್ಮಾಪಕರಾಗಿ. ಹೀರೋ ಆಗಿ ಅಲ್ಲ. ಡಾಲಿ ಪಿಕ್ಚರ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ ಧನಂಜಯ್ ಮೊದಲಿಗೆ ತಾನೇ ಅಭಿನಯಿಸಿದ 'ಬಡವ ರಾಸ್ಕಲ್' ಹಾಗೂ 'ಹೆಡ್ ಬುಶ್' ಚಿತ್ರಗಳಿಗೆ ಬಂಡವಾಳ ಹೂಡಿದ್ದರು. ಬಳಿಕ ಇತ್ತೀಚೆಗಷ್ಟೇ ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಸಿನಿಮಾ 'ಟಗರು ಪಲ್ಯ'ವನ್ನು ಘೋಷಿಸಲಾಗಿತ್ತು. ಮೋಷನ್ ಪೋಸ್ಟರ್ ಮೂಲಕ ಸುದ್ದಿಯಾಗಿದ್ದ 'ಟಗರು ಪಲ್ಯ' ಇದೀಗ ಸೆಟ್ಟೇರೋಕೆ ಸಿದ್ಧವಾಗಿದೆ.
ಟಗರು ಪಲ್ಯಕ್ಕೆ ಉಮೇಶ್ ಕೆ.ಕೃಪ ಡೈರೆಕ್ಟರ್. ಡಾಲಿ ಗೆಳೆಯ ನಾಗಭೂಷಣ್ ಹೀರೋ. ಉಮೇಶ್ ಅವರು ಈ ಮೊದಲು ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದವರು. ಬೇರೆ ನಿರ್ದೇಶಕರ ಜಒತೆಯೂ ಕೆಲಸ ಮಾಡಿದ ಅನುಭವವಿದೆ. ಇದು ಕಂಟೆಂಟ್ ಬೇಸ್ ಸಿನಿಮಾ. ಸ್ಕ್ರಿಪ್ಟ್ ಕೆಲಸ ಮುಗಿದಿದ್ದು ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದಿದ್ದಾರೆ ಡೈರೆಕ್ಟರ್ ಉಮೇಶ್ ಕೆ.ಕೃಪ.
ವಾಸುಕಿ ವೈಭವ್ ಸಂಗೀತವಿದ್ದು, ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ನಟಿಸುತ್ತಿದ್ದಾರೆ. ಹೀರೋಯಿನ್ ಇನ್ನೂ ಫೈನಲ್ ಆಗಿಲ್ಲ.