` ಬನಾರಸ್ ಹೀರೋ ಕನ್ನಡ ಪ್ರೀತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬನಾರಸ್ ಹೀರೋ ಕನ್ನಡ ಪ್ರೀತಿ
Zaid Khan Image

ಬನಾರಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಹೊಸ ಹೀರೋ ಝೈದ್ ಖಾನ್. ಕಾಂಗ್ರೆಸ್ ರಾಜಕಾರಣಿ ಜಮೀರ್ ಅಹ್ಮದ್ ಪುತ್ರ ಎಂಬುದು ಮೊದಲ ಚಿತ್ರಕ್ಕೆ ಪ್ಲಸ್ಸೂ ಆಯಿತು. ಮೈನಸ್ಸೂ ಆಯಿತು. ಅದೆಲ್ಲವನ್ನೂ ಮೀರಿ ಝೈದ್ ಖಾನ್ ಭರವಸೆ ಹುಟ್ಟಿಸಿದ್ದು ನಟನೆಯ ಮೂಲಕ. ಒಳ್ಳೆಯ ನಟನಾಗುತ್ತಾನೆ ಎನಿಸಿರುವ ಝೈದ್ ಖಾನ್ ಇತ್ತೀಚೆಗೆ ಹಿಂದಿ ಚಿತ್ರವೊಂದರ ಆಫರ್ ಬೇಡ ಎಂದಿದ್ದಾರೆ.

ಬನಾರಸ್ ನಂತರ ಹಿಂದಿಯ ಖ್ಯಾತ ನಿರ್ದೇಶಕರೊಬ್ಬರು ಝೈದ್ ಖಾನ್ ಅವರಿಗೆ ಸಿನಿಮಾ ಮಾಡೋಕೆ ಮುಂದೆ ಬಂದಿದ್ದರು. ಬಾಲಿವುಡ್‍ನ ಟಾಪ್ ಹೀರೋಯಿನ್ ಆಯ್ಕೆಯಾಗಿದ್ದರು. ಎಲ್ಲವೂ ಓಕೆ ಆಗಿತ್ತು. ಆದರೆ ಝೈದ್ ಖಾನ್ ಕೊನೆಯ ಕ್ಷಣದಲ್ಲಿ ಸಿನಿಮಾ ರಿಜೆಕ್ಟ್ ಮಾಡಿದ್ದಾರೆ.

ಇಷ್ಟಕ್ಕೂ ಝೈದ್ ಖಾನ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಣ ಎಂದು ಹೇಳಿದ್ದರಂತೆ. ಆದರೆ ಆ ಹಿಂದಿಯ ನಿರ್ದೇಶಕರು ಹಿಂದಿಯಲ್ಲಿ ಮಾತ್ರ ಮಾಡೋದಾಗಿ ಹಠ ಹಿಡಿದರಂತೆ.

ಆದ್ದರಿಂದ ಆ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ ಝೈದ್ ಖಾನ್. ಈ ಬಗ್ಗೆ ಆ ನಿರ್ದೇಶಕರಿಗೆ ಝೈದ್ ಖಾನ್ ಉತ್ತರವನ್ನು ಕೂಡ ನೀಡಿದ್ದಾರಂತೆ. 'ನೀವು ನನ್ನನ್ನು ಅಪ್ರೋಚ್ ಮಾಡಲು ಕಾರಣವಾಗಿರೋದು ಬನಾರಸ್ ಸಿನಿಮಾ. ಆದರೆ ಅದು ಪ್ರಧಾನವಾಗಿ ತಯಾರಾಗಿರುವುದು ಕನ್ನಡದಲ್ಲಿ ಮತ್ತು ಅದು ಗೆದ್ದಿರುವುದು ಕನ್ನಡಿಗರಿಂದ. ನಾನು ಯಾವುದೇ ಕಾರಣಕ್ಕೂ ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಲು ಸಿದ್ಧನಿಲ್ಲ.. ಕನ್ನಡದ ಜೊತೆಗೆ ಮಾಡಿದರೆ ಮಾತ್ರ ಬೇರೆ ಭಾಷೆಯಲ್ಲೂ ಸಿನಿಮಾ ಮಾಡುತ್ತೇನೆ' ಎಂದು ಹೇಳಿದ್ದಾರಂತೆ.