ಸೆ.30ರಂದು ರಿಲೀಸ್ ಆದ ಕಾಂತಾರದ ಆರ್ಭಟ..ದೈವೀಕ ಯಾತ್ರೆ.. 400 ಕೋಟಿಯ ಗಡಿಯನ್ನೂ ದಾಟಿದೆ. ರಿಷಬ್ ಶೆಟ್ಟಿ, ಹೊಂಬಾಳೆಯ ಜೋಡಿ ಮತ್ತೊಂದು ಹೊಸ ದಾಖಲೆ ಬರೆದಿದೆ. 50 ದಿನಗಳನ್ನು 400 ಕೋಟಿ ಕ್ಲಬ್ ಸೇರಿ ಹೊಸ ದಾಖಲೆಯನ್ನು ಬರೆದಿದೆ. ಅಬ್ಬರದ ಪಬ್ಲಿಸಿಟಿ ಬದಲು ಸಿನಿಮಾ ನೋಡಿದವರ ಮೌತ್ ಪಬ್ಲಿಸಿಟಿಯಿಂದಲೇ ಗೆದ್ದ ಕಾಂತಾರದ 400 ಕೋಟಿಯ ದಾಖಲೆ ವಿಶೇಷಗಳಲ್ಲಿ ವಿಶೇಷ.
ಕರ್ನಾಟಕ ಬಿಟ್ಟರೆ, ಹಿಂದಿ ಬೆಲ್ಟ್ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಕಾಂತಾರ ಹಿಂದಿ ವರ್ಷನ್ ಸುಮಾರು 96 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನೂ ಹೌಸ್ ಫುಲ್ ರನ್ನಿಂಗ್ ಕಾಣುತ್ತಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ 60 ಕೋಟಿ ರೂ. ತಮಿಳುನಾಡಿನಲ್ಲಿ 12.70 ಕೋಟಿ ರೂ. ಕೇರಳದಲ್ಲಿ 19.20 ಕೋಟಿ ರೂ. ಹಾಗೇ ವಿದೇಶದಲ್ಲಿ ಸುಮಾರು 44.50 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಮೂಲಗಳು ಹೇಳುತ್ತಿವೆ. ಕನ್ನಡದಲ್ಲಿ ಕೆಜಿಎಫ್ ಚಾಪ್ಟರ್ 2ನ 186 ಕೋಟಿಯ ಗಡಿ ದಾಟಿದ್ದು, 200 ಕೋಟಿಯನ್ನೂ ಮೀರಿ ಮುನ್ನಡೆಯುತ್ತಿದೆ.
ಮೇನ್ ಥಿಯೇಟರ್ ನರ್ತಕಿ ಒಂದನ್ನು ಬಿಟ್ಟರೆ ದೇಶದ ಎಲ್ಲ ಮೆಟ್ರೋ ಸಿಟಿಗಳಲ್ಲಿ 50 ದಿನ ಪೂರೈಸಿದ ಸಿನಿಮಾ ಕಾಂತಾರ. ವಿದೇಶದಲ್ಲಿ ಕೂಡಾ 50 ದಿನ ಪೂರೈಸಿದ 2ನೇ ಕನ್ನಡ ಸಿನಿಮಾ ಕಾಂತಾರ. ಬೆಂಗಳೂರಿನ ಊರ್ವಶಿ, ಕಾವೇರಿ ಥಿಯೇಟರ್ಗಳಲ್ಲಿ ಕಳೆದ 20 ವರ್ಷಗಳಲ್ಲಿ 50 ದಿನ ಪ್ರದರ್ಶನ ಕಂಡ ಮೊದಲ ಸಿನಿಮಾ ಕಾಂತಾರ.
ಬಾಕ್ಸಾಫೀಸ್ನಲ್ಲಿ 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ನಂ.1 ಕನ್ನಡ ಸಿನಿಮಾ, ಕೆಜಿಎಫ್ ಚಾಪ್ಟರ್ 2 ಈಗ ನಂ.2 ಸ್ಥಾನ ಗಳಿಸಿದೆ. ಕನ್ನಡದಲ್ಲಿ ಅತೀ ಹೆಚ್ಚು ಜನ ನೋಡಿದ ಸಿನಿಮಾ ಕಾಂತಾರ. 1 ಕೋಟಿಗೂ ಹೆಚ್ಚು ಜನ ನೋಡಿರುವುದು ಕೂಡಾ ದಾಖಲೆಯೇ.
ಕಾಂತಾರದ ನಂತರ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಬಿರುದು ಪಡೆದರೆ, ಹೊಸ ಕ್ರಷ್ ಆಗಿ ಹೊರಹೊಮ್ಮಿರುವುದು ಸಪ್ತಮಿ ಗೌಡ. ಚಿತ್ರದೊಂದಿಗೆ ಕರಾವಳಿಯ ಸಂಸ್ಕೃತಿ ದೈವಗಳು, ಭೂತಕೋಲ ಇಡೀ ಜಗತ್ತಿಗೆ ಪರಿಚಿತವಾಗಿದೆ