ಅಪ್ಪು ಇಲ್ಲ. ಇನ್ನು ನೀವೇ ನಮಗೆ ಪವರ್ ಸ್ಟಾರ್ ಎಂದು ಅಭಿಮಾನಿಗಳು ಆಗಲೇ ಯುವ ರಾಜಕುಮಾರ್ಗೆ ಜ್ಯೂ.ಪವರ್ ಸ್ಟಾರ್ ಕೊಟ್ಟಿದ್ದಾಗಿದೆ. ಹೊಂಬಾಳೆ ಸಂಸ್ಥೆಯೇ ಯುವರಾಜ್ನನ್ನು ಲಾಂಚ್ ಮಾಡುತ್ತಿದ್ದು, ಪುನೀತ್ ವೃತ್ತಿ ಜೀವನದ ಶ್ರೇಷ್ಟ ಚಿತ್ರ ಕೊಟ್ಟ ಸಂತೋಷ್ ಆನಂದರಾಮ್ ನಿರ್ದೇಶನ ಮಾಡುತ್ತಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಕಿರಿಯ ಪುತ್ರ ಯುವ ರಾಜ್ ಕುಮಾರ್ ಬೆಳ್ಳಿತೆರೆ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ.
ಪುನೀತ್ ರಾಜ್‌ಕುಮಾರ್ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿರುವ ಯುವ ರಾಜ್‌ಕುಮಾರ್ ಅಭಿನಯಿಸೋ ಮೊದಲ ಸಿನಿಮಾದ ಮೇಲೆ ಅಪ್ಪು ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ಸದ್ಯದಲ್ಲೇ ಅಪ್ಡೇಟ್ ಕೊಡುತ್ತೇನೆ ಎಂದು ಹೇಳಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಇದೀಗ ಆ ಸಿನಿಮಾದಲ್ಲಿ ನಟಿಸೋ ಕಲಾವಿದರಿಗೆ ಅಡಿಷನ್ ಕರೆದಿದ್ದಾರೆ.
ಜ್ಯೂ. ಪವರ್ ಸ್ಟಾರ್ ಜೊತೆ ನಟಿಸೋಕೆ ಕಲಾವಿದರಿಗಾಗಿ ಆಡಿಷನ್ ಕರೆಯಲಾಗಿದೆ. 16 ರಿಂದ 25 ವರ್ಷದೊಳಗಿನ ಕಲಾವಿದರು ಮಂಗಳೂರು ನಗರದ ಕೂಟಕ್ಕಳ ಆಡಿಟೋರಿಯಂನಲ್ಲಿ ನವೆಂಬರ್ 26ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರೋ ಆಡಿಷನ್ನಲ್ಲಿ ಭಾಗವಹಿಸಸಬಹುದು. ಇನ್ನು ತಂತ್ರಜ್ಞರ ಆಯ್ಕೆ ಫೈನಲ್ ಆಗಿಲ್ಲ. ಈ ಅಡಿಷನ್ ಮುಗಿದ ಮೇಲೆ ಸೂಕ್ತ ಸಮಯದಲ್ಲಿ ಚಿತ್ರದ ಮುಹೂರ್ತ, ಶೂಟಿಂಗ್ ಶುರುವಾಗುವ ಸಮಯ ಇತ್ಯಾದಿಗಳನ್ನು ಘೋಷಿಸುವ ಸಾಧ್ಯತೆ ಇದೆ.