ಪವನ್ ಒಡೆಯರ್ ಮತ್ತು ಇಶಾನ್ ಕಾಂಬಿನೇಶನ್ ನಲ್ಲಿ ಬರ್ತಿರುವ ರೆಮೋ ಸೌಂಡ್ ಸಿಕ್ಕಾಪಟ್ಟೆ ಜೋರಾಗಿದೆ. ನವೆಂಬರ್ 25ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ನಾಯಕ ನಟ ಇಶಾನ್ ಗೆ ಸ್ಟಾರ್ ನಿರ್ದೇಶಕರಿಂದ ಆಫರ್ ಮೇಲೆ ಆಫರ್ ಬರ್ತಿರುವುದು ವಿಶೇಷ. ಹ್ಯಾಂಡ್ಸಮ್ ಹಂಕ್ ಇಶಾನ್ ನಟಿಸಿರುವ ರೆಮೋ ಹಾಡು, ಟೀಸರ್, ಟ್ರೇಲರ್ ಎಲ್ಲವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆದ್ರೆ ಅದಕ್ಕೂ ಮಿಗಿಲಾಗಿ ನಾಯಕ ನಟ ಇಶಾನ್ ನಟನೆ, ಲುಕ್, ಪರ್ಸನಾಲಿಟಿ, ಸ್ಕ್ರೀನ್ ಅಪಿಯರೆನ್ಸ್ ಎಲ್ಲ ಪ್ರೇಕ್ಷಕರು ಹಾಗೂ ಸ್ಟಾರ್ ನಿರ್ದೇಶಕರನ್ನು ಇಂಪ್ರೆಸ್ ಮಾಡಿದೆ.
ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ಇಶಾನ್ ಜೊತೆ ಈಗಾಗಲೇ ಹೊಸ ಸಿನಿಮಾ ಘೋಷಿಸಿದ್ದಾರೆ. ಭಜರಂಗಿ ಖ್ಯಾತಿಯ ಎ ಹರ್ಷ, ರ್ಯಾಂಬೋ ಖ್ಯಾತಿಯ ಅನಿಲ್ ಹಾಗೂ ಯುವ ರಾಜ್ ಕುಮಾರ್ ಮೊದಲಸಿನಿಮಾ ಘೋಷಿಸಿದ್ದ ಪುನೀತ್ ರುದ್ರನಾಗ್ ಇಶಾನ್ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈ ಬಗ್ಗೆ ನಾಯಕ ಇಶಾನ್ ಜೊತೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರಂತೆ. ರೆಮೋ ಬಿಡುಗಡೆಯ ಮುನ್ನವೇ ಇಷ್ಟೊಂದು ನಿರ್ದೇಶಕರನ್ನು ಇಂಪ್ರೆಸ್ ಮಾಡಿರುವ ಇಶಾನ್, ಭರವಸೆಯ ನಾಯಕ ನಟನಾಗಿ ಹೊರಹೊಮ್ಮೋ ಸೂಚನೆ ಕೊಟ್ಟಿದ್ದಾರೆ.
ಪವನ್ಒಡೆಯರ್ನಿರ್ದೇಶನದ ಮ್ಯೂಸಿಕಲ್ ಲವ್ ಸ್ಟೋರಿಯಲ್ಲಿ ಇಶಾನ್ ಹೀರೋ. ಆಶಿಕಾ ರಂಗನಾಥ್ ನಾಯಕಿ. ಸಿ ಆರ್ಮನೋಹರ್ ನಿರ್ಮಾಣದ ಈ ಚಿತ್ರದಲ್ಲಿ ಬಹುಭಾಷಾ ನಟ ಶರತ್ಕುಮಾರ್, ರಾಜೇಶ್ನಟರಂಗ, ಮಧು ಶಾ ನಟಿಸಿದ್ದಾರೆ. ಅರ್ಜುನ್ಜನ್ಯಾ ಸಂಗೀತವಿದೆ.