ನಾನು ಗೂಗ್ಲಿ ನೋಡಿದ ದಿನದಿಂದಲೇ ಈ ಡೈರೆಕ್ಟರ್ ಜೊತೆ ಕೆಲಸ ಮಾಡಬೇಕು ಅನ್ನೋ ಆಸೆ ಹುಟ್ಟಿತು. ಅದಕ್ಕೆ ತಕ್ಕಂತೆಯೇ ಪವನ್ ಒಡೆಯರ್ ಕಥೆ ಹೇಳಿದಾಗ ಅವರ ನಿರೂಪಣೆ, ಸ್ಕ್ರಿಪ್ಟ್ ತುಂಬಾ ಇಷ್ಟವಾಯಿತು. ಒಪ್ಪಿಕೊಂಡೆ. ಅಲ್ಲದೆ ಚಿತ್ರಕ್ಕೆ ನಾನೇ ಯಾಕೆ ಎಂದು ಕೇಳಿದೆ. ನಿಮ್ಮ ಫೇಸ್‍ನಲ್ಲಿ ಇನ್ನೋಸೆನ್ಸಿ ಇದೆ. ಆ ಇನ್ನೋಸೆಂಟ್ ನನ್ನ ಚಿತ್ರದ ಪಾತ್ರಕ್ಕೆ ಸೂಟ್ ಆಯಿತು ಎಂದರು. ಅಲ್ಲಿಗೆ, ನಾನು ಪಾತ್ರಕ್ಕೆ ಹೊಂದಿಕೊಳ್ಳುತ್ತೇನೆ ಎನ್ನುವ ಡೈರೆಕ್ಟರ್ ಕಲ್ಪನೆಯೂ ಇಷ್ಟವಾಯಿತು. ಹೀಗಾಗಿ ರೇಮೋ ಚಿತ್ರ ಒಪ್ಪಿಕೊಂಡೆ.. ಎನ್ನುತ್ತಾ ಹೋಗುತ್ತಾರೆ ಆಶಿಕಾ ರಂಗನಾಥ್.
ಆಶಿಕಾಗೆ 2022ರ 2ನೇ ಸಿನಿಮಾ ರೇಮೋ. ಅವತಾರ್ ಪುರುಷ ಹಿಟ್ ಆಗಿತ್ತು. ಈಗ ರೇಮೋ ಬರುತ್ತಿದೆ. ಪುನೀತ್ ಅವರ ಜೇಮ್ಸ್‍ನಲ್ಲಿ ಕಾಣಿಸಿಕೊಂಡಿದ್ದರೂ ಅದು ಪುನೀತ್ ಮೇಲಿನ ಅಭಿಮಾನ, ಪ್ರೀತಿಯಿಂದ. ಪ್ರಮೋಷನ್ ಸಾಂಗ್‍ನಲ್ಲಿ ನಟಿಸಿದ್ದರು. ಈಗ ರೇಮೋ ತಿಂಗಳ ಕೊನೆಯಲ್ಲಿ ಬರುತ್ತಿದೆ.
ಇದು ಕಂಪ್ಲೀಟ್ ಲವ್ & ಮ್ಯೂಸಿಕಲ್ ಸ್ಟೋರಿ. ನನಗೆ ಮೊದಲ ಅನುಭವ. ಲವ್ ಸ್ಟೋರಿಗಳಲ್ಲಿ ಹೀರೋಗಿದ್ದಷ್ಟೇ ಹೀರೋಯಿನ್‍ಗೂ ಸ್ಪೇಸ್ ಇರುತ್ತದೆ. ಪ್ರಮುಖ ಪಾತ್ರವೇ ಇರುತ್ತದೆ. ಮೋಹನಳ ಪಾತ್ರ ಹೆಚ್ಚೂ ಕಡಿಮೆ ನನ್ನ ವೊರಿಜಿನಲ್ ಕ್ಯಾರೆಕ್ಟರ್ ಕೂಡಾ ಹೌದು. ಪ್ರೇಕ್ಷಕರು ಖಂಡಿತಾ ಈ ಚಿತ್ರದ ನಂತರ ಆಶಿಕಾ ರಂಗನಾಥ್‍ರನ್ನು ಬೇರೆಯದೇ ರೀತಿ ನೋಡುತ್ತಾರೆ ಎನ್ನುವ ಕಾನ್ಫಿಡೆನ್ಸ್ ಆಶಿಕಾ ಅವರಲ್ಲಿ ತುಂಬಿ ತುಳುಕುತ್ತಿದೆ.
ಸಿಂಗರ್ ಪಾತ್ರ. ಒಬ್ಬ ಸಿಂಗರ್ ಹೇಗಿರುತ್ತಾರೆ ಎಂಬುದಕ್ಕೆ ನನಗೆ ಶ್ರೇಯಾ ಘೋಷಾಲ್ ಟಿಪ್ಟ್ ಕೊಟ್ಟರು. ಉಳಿದಂತೆ ನಿರ್ದೇಶಕರು ಹೇಳಿದಂತೆ ಅವರ ಕಲ್ಪನೆಗೆ ತಕ್ಕಂತೆ ನಟಿಸಿದ್ದೇನೆ ಎನ್ನುವ ಆಶಿಕಾ ಹೀರೋ ಇಶಾನ್ ಹಾಗೂ ನನ್ನ ಮಧ್ಯೆ ಒಳ್ಳೆ ಫ್ರೆಂಡ್‍ಶಿಪ್ ಬೆಳೆಯೋಕೆ ಪವನ್ ಒಡೆಯರ್ ಬಿಟ್ಟರು. ಸಿನಿಮಾದಲ್ಲಿರೋದು ಲವ್ ಸ್ಟೋರಿ. ಕೆಲವು ಇಂಟಿಮೇಟ್ ಸೀನ್ಸ್ ಕೂಡಾ ಇವೆ. ಅಂತಹ ದೃಶ್ಯಗಳಲ್ಲಿ ನಟಿಸುವಾಗ ಕಂಪರ್ಟ್ ಎನಿಸಬೇಕು. ಅದಕ್ಕೆ ನಮ್ಮ ಫ್ರೆಂಡ್‍ಶಿಪ್ ಸಹಾಯ ಮಾಡಿತು ಎನ್ನುತ್ತಾರೆ.
ಸಿ.ಆರ್.ಮನೋಹರ್ ನಿರ್ಮಾಣದ ರೇಮೋಗೆ ಪವನ್ ಒಡೆಯರ್ ನಿರ್ದೇಶಕ.