ಒಬ್ಬಳು ಭಾವುಕತೆಯಲ್ಲೇ ಮಿಂದೇಳುವವಳು. ಮೇಘಾ ಶೆಟ್ಟಿ. ಅವಳು ಐ ಲವ್ ಯೂ ಅಂತಾಳೆ. ಮತ್ತೊಬ್ಬಳು ಪಟಾಕಿ. ತರಲೆ. ಬೋಲ್ಡ್. ಆದಿತಿ ಪ್ರಭುದೇವ. ಅವಳೂ ಐ ಲವ್ ಯೂ ಅಂತಾಳೆ.
ಮತ್ತೊಬ್ಬಳು ಮುಗ್ಧತೆಯನ್ನೇ ಮುಖವಾಡದಂತೆ ಹೊತ್ತು ಬದುಕುವವಳು. ಆಕ್ಚುವಲಿ ಮುಗ್ದೆ. ಇನ್ನೋಸೆಂಟ್. ರಚನಾ ಇಂದರ್. ಅವಳೂ ಐ ಲವ್ ಯೂ ಅಂತಾಳೆ. ಅವರಿಬ್ಬರ ಪ್ರೀತಿ ಸ್ವೀಕರಿಸಬೇಕಾದವನು ಒಬ್ಬನೇ. ಗೋಲ್ಡನ್ ಸ್ಟಾರ್ ಗಣೇಶ್.
ತ್ರಿಬ್ಬಲ್ ರೈಡಿಂಗ್ ಚಿತ್ರದ ಟ್ರೇಲರ್ ನೋಡಿದವರಿಗೆ ಒಂದು ಮಜಾಕ್ ನಕ್ಕೊಂಡ್ ಬರೋಣು ಎನ್ನಿಸಿದ್ರೆ ಅದು ಸಹಜ. ಮಹೇಶ್ ಗೌಡ ಕಾಮಿಡಿಯನ್ನೇ ಆಯ್ಕೆ ಮಾಡಿಕೊಂಡು ನಗಿಸೋ ಕಾಯಕ ಮಾಡಿದ್ದಾರೆ. ಹಾಗಂತ ಆಕ್ಷನ್, ಡ್ರಾಮಾ, ಚೇಸಿಂಗ್, ಫೈಟಿಂಗು ಇಲ್ಲ ಎಂದಲ್ಲ. ಎಲ್ಲವೂ ಇದೆ. ಹದವಾಗಿ ಬೆರೆಸಿ ತ್ರಿಬ್ಬಲ್ ರೈಡಿಂಗ್ ಮಾಡಲಾಗಿದೆ. ಸಾಧುಕೋಕಿಲ, ರವಿಶಂಕರ್.. ಹೀಗೆ ಎಲ್ಲರೂ ಇದ್ದಾರೆಂದ ಮೇಲೆ ಇದೊಂದು ಫ್ಯಾಮಿಲಿ ಪ್ಯಾಕೇಜ್ ಎನ್ನುವುದರಲ್ಲಿ ಅನುಮಾನವಿಲ್ಲ. ನವೆಂಬರ್ 16ಕ್ಕೆ ತ್ರಿಬ್ಬಲ್ ರೈಡಿಂಗ್ ರಿಲೀಸ್ ಆಗಲಿದೆ.