ಕಿಚ್ಚು ಸುದೀಪ್ ಮತ್ತು ಪ್ರಿಯಾ ಸುದೀಪ್ ಶಿರಡಿಯ ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟಿದ್ದಾರೆ. ಇತ್ತೀಚೆಗೆ ತಾನೇ ಆಸ್ಟ್ರೆಲಿಯಾ ಪ್ರವಾಸ ಮಾಡಿ ವಿಶ್ವಕಪ್ ಮ್ಯಾಚ್ ನೋಡಿ ಬಂದಿದ್ದ ಪ್ರಿಯಾ ವಾಪಸ್ ಬಂದ ಮೇಲೆ ತೀರ್ಥಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಸಾಯಿಬಾಬಾ ಸನ್ನಿಧಿಗೆ ತೆರಳಿದ ನಂತರ ಶಿರಡಿಯಲ್ಲಿರುವ ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟಿದ್ದಾರೆ.
ವೃದ್ಧಾಶ್ರಮದಲ್ಲಿರುವ ಹಿರಿಯ ಜೀವಗಳ ಆರೋಗ್ಯ ವಿಚಾರಿಸಿದ ಸುದೀಪ್, ಪ್ರಿಯಾ ದಂಪತಿ ವೃದ್ಧಾಶ್ರಮದ ವ್ಯವಸ್ಥೆಯನ್ನೂ ನೋಡಿಕೊಂಡು ಬಂದಿದ್ದಾರೆ. ದ್ವಾರಕಮಾಲ್ ವೃದ್ಧಾಶ್ರಮದಲ್ಲಿ ಸ್ವಲ್ಪ ಹೊತ್ತು ಕಳೆದು ಬಂದಿದ್ದಾರೆ. ಮಗಳು ಸಾನ್ವಿಯನ್ನೂ ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ ಸುದೀಪ್ ದಂಪತಿ. ಇವರ ಜೊತೆ ಕುಟುಂಬದ ಆಪ್ತಮಿತ್ರರೂ ಹೋಗಿರುವುದು ವಿಶೇಷ.
ಹೊಸದೊಂದು ಸಿನಿಮಾಗೆ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಕಿಚ್ಚ ಸುದೀಪ್, ಅದು ಶುರುವಾಗುವ ಮೊದಲು ಇಡೀ ಫ್ಯಾಮಿಲಿಯೊಂದಿಗೆ ಸುತ್ತುವ ಮೂಡ್‍ನಲ್ಲಿದ್ದಾರೆ. ಹೀಗಾಗಿಯೇ ಆಸ್ಟ್ರೇಲಿಯಾ ಪ್ರವಾಸ ಮುಗಿಯುತ್ತಿದ್ದಂತೆಯೇ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.