ಯುವ ರಾಜಕುಮಾರ್ ಚಿತ್ರರಂಗಕ್ಕೆ ಬರುವುದು ಗುಟ್ಟಲ್ಲ. ಅಭಿಮಾನಿಗಳ ಆಸೆ ಮತ್ತು ನಿರೀಕ್ಷೆ. ಯುವ ರಣಧೀರ ಕಂಠೀರವದ ಮೂಲಕ ಬರಬೇಕಿದ್ದ ಯುವರಾಜನ ಪಟ್ಟಾಭಿಷೇಕಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಅಪ್ಪು ದೂರವಾದ ಮೇಲಂತೂ ಯುವ ಮೇಲಿನ ನಿರೀಕ್ಷೆ ಜೋರಾಗಿದೆ. ಚಿತ್ರವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುತ್ತಿದೆ. ಸಂತೋಷ್ ಆನಂದರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಆದರೆ.. ಯಾವಾಗ... ಈ ನಿರೀಕ್ಷೆಗೆ ಈಗ ಉತ್ತರವೂ ಸಿಕ್ಕಿದೆ.
ಅನೌನ್ಸ್ಮೆಂಟ್ ನಂತರ ಚಿತ್ರದ ಬಗ್ಗೆ ಏನು ಅಪ್ಡೇಟ್ ಇಲ್ಲ ಎಂದು ಬೇಸರದಲ್ಲಿದ್ದ ಫ್ಯಾನ್ಸ್ಗೆ ನಿರ್ದೇಶಕ ಸಂತೋಷ್ ರಿಯಾಕ್ಟ್ ಮಾಡಿದ್ದಾರೆ. ನನ್ನ ಸಹೋದರ ಸಮಾನರಾದ ಎಲ್ಲಾ ಅಭಿಮಾನಿಗಳಿಗೆ ಅತೀ ಶೀಘ್ರದಲ್ಲಿ ನನ್ನ ಮತ್ತು ಯುವರಾಜ್ಕುಮಾರ್ ಕಾಂಬಿನೇಷನ್ ಚಿತ್ರದ ಎಲ್ಲಾ ಮಾಹಿತಿ ಹೊರಬರುತ್ತದೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸದ್ಯದಲ್ಲೇ ಚಿತ್ರದ ಅಪ್ಡೇಟ್ ಸಿಗಲಿದೆ ಎಂದು ಸೂಚನೆ ನೀಡಿದ್ದಾರೆ.
ಹೊಂಬಾಳೆಯನ್ನು ತಮ್ಮದೇ ಸಂಸ್ಥೆ ಎಂಬಂತೆ ಪ್ರೀತಿಸಿದ್ದರು ಪುನೀತ್ ರಾಜಕುಮಾರ್. ಈಗ ಅದೇ ಸಂಸ್ಥೆಯ ಮೂಲಕ ಯುವರಾಜಕುಮಾರ್ ಎಂಟ್ರಿ ಕೊಡುತ್ತಿದ್ದಾರೆ.ಸಂತೋಷ್ ಆನಂದರಾಮ್ ಹಾಕಿರುವ ಫೋಟೋದಲ್ಲಿರುವವರೆಲ್ಲ ಯುವ ಫಸ್ಟ್ ಸಿನಿಮಾ ಟೀಂನಲ್ಲೂ ಇರುತ್ತಾರಾ? ನಿರೀಕ್ಷೆಯಂತೂ ಇದೆ. ಬ್ರೇಕಿಂಗ್ ನ್ಯೂಸ್ ಯಾವಾಗ ಹೊರಬೀಳಲಿದೆ.. ಕಾಯುತ್ತಿದ್ದಾರೆ ದೊಡ್ಮನೆ ಫ್ಯಾನ್ಸ್.