ಕಾಂತಾರದ ಲೀಲಾ ಪಾತ್ರ ಇಡೀ ದೇಶದ ಸಿನಿಮಾ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. ಸಿಂಗಾರ ಸಿರಿಯೇ ಹಾಡು ಎಲ್ಲೆಲ್ಲೂ ಗುನುಗುತ್ತಿದೆ. ರಿಷಬ್ ಶೆಟ್ಟಿಯವರ ಶಿವನ ಪಾತ್ರದ ಜೊತೆ ಲೀಲಾಳ ರೊಮ್ಯಾನ್ಸ್ ರೋಮಾಂಚನ ಹುಟ್ಟಿಸುತ್ತದೆ. ಒಂದೆಡೆ ಕಾಂತಾರ ಯಶಸ್ಸಿನ ನಾಗಾಲೋಟ ಹೀಗಿರುವಾಗಲೇ ಮತ್ತೊಂದು ಚಿತ್ರಕ್ಕೆ ಲೀಲಾ.. ಅಲ್ಲಲ್ಲ.. ಸಪ್ತಮಿ ಗೌಡ ಹೊಸ ಚಿತ್ರಕ್ಕೆ ಯೆಸ್ ಎಂದಿದ್ದಾರೆ. ಹೀರೋ ಅಭಿಷೇಕ್ ಅಂಬರೀಷ್. ಡೈರೆಕ್ಟರ್ ಪೈಲ್ವಾನ್ ಕೃಷ್ಣ.
ಕಾಳಿ ಚಿತ್ರಕ್ಕೆ ಸಪ್ತಮಿ ಗೌಡ ಯೆಸ್ ಎಂದಿದ್ದಾರೆ ಅನ್ನೋ ಮಾಹಿತಿ ಇದೆಯಾದರೂ ಕೃಷ್ಣ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದು ಚಾಮರಾಜನಗರ ಕೊಳ್ಳೆಗಾಲದ ಕಾವೇರಿ ಹೋರಾಟದ ಬ್ಯಾಕ್‍ಗ್ರೌಂಡ್‍ನಲ್ಲಿ ನಡೆಯುವ ಕಥೆಯಾಗಿದ್ದು ಚಿತ್ರದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ.