ಸ್ಯಾಂಡಲ್ವುಡ್ನ ಕ್ಯೂಟ್ ಕ್ಯೂಟ್ ಜೋಡಿಗಳಲ್ಲೊಂದು ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿ. ಅದರಲ್ಲಿಯೂ ಲವ್ ಮಾಕ್ಟೇಲ್ ಚಿತ್ರದ ನಂತರ ಇವರಿಬ್ಬರ ಜೋಡಿಗೊಂದು ಸೆನ್ಸೇಷನ್ ಕ್ರಿಯೇಟ್ ಆಗಿದೆ. ಕಳೆದ ವರ್ಷ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ಇದೀಗ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಕ್ರಿಸ್ಮಿ ನೆಸ್ಟ್ ಅನ್ನೋದು ಹೊಸ ಮನೆಯ ಹೆಸರು. ಕೃಷ್ಣ ಮತ್ತು ಮಿಲನ ಅವರ ಹೆಸರಿನ ಮೊದಲ ಅಕ್ಷರಗಳನ್ನೇ ತೆಗೆದುಕಕೊಂಡು ಮನೆಗೆ ನಾಮಕರಣ ಮಾಡಿದ್ದಾರೆ. ಗೂಡಿನಂತೇನೂ ಇಲ್ಲ. ಅರಮನೆಯಂತೆಯೇ ಇದೆ. ಆದರೆ ಅದು ಪ್ರೀತಿಯ ಗೂಡು ಕೂಡಾ ಹೌದು.