ಗಾಳಿಪಟ 2 ಸಕ್ಸಸ್ ಜೋಷ್‍ನಲ್ಲಿರೋ ಗೋಲ್ಡನ್ ಸ್ಟಾರ್ ಗಣೇಶ್ ಆದಿತಿ ಪ್ರಭುದೇವ, ಮೇಘಾ ಶೆಟ್ಟಿ ಹಾಗೂ ರಚನಾ ಇಂದರ್ ಜೊತೆ ತ್ರಿಬಲ್ ರೈಡಿಂಗ್ ಬರುತ್ತಿದ್ದಾರೆ. ಇದೇ ಮೊದಲ ಬಾರಿಗೆ ಗಣೇಶ್‍ಗೆ ಮೂರು ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡುವ ಚಾನ್ಸು ಸಿಕ್ಕಿದೆ. ಆಫರ್ ಕೊಡಿಸಿರುವುದು ಡೈರೆಕ್ಟರ್ ಮಹೇಶ್ ಗೌಡ ಮತ್ತು ಪ್ರೊಡ್ಯೂಸರ್ ವೈ.ಎಂ.ರಾವ್.
ನ.25ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಪ್ರಚಾರವೂ ಶುರುವಾಗಿದೆ. ಮೇಕಿಂಗ್ ಅದ್ಧೂರಿಯಾಗಿದ್ದು ನಿರ್ದೇಶಕ ಮಹೇಶ್ ಗೌಡ ಬಗ್ಗೆ ಪ್ರೀತಿಯ ಮಾತು ಹೇಳಿದ್ದಾರೆ ಗಣೇಶ್. ಮುಂಗಾರು ಮಳೆಯಿಂದ ಶುರುವಾದ ಪರಿಚಯ 15 ವರ್ಷಗಳ ನಂತರ ಸಿನಿಮಾ ಮಾಡುವುದಕ್ಕೆ ಪ್ರೇರೇಪಿಸಿದೆ. ಇಡೀ ಸಿನಿಮಾ ಕಾಮಿಡಿ.. ಕಾಮಿಡಿ.. ಕಾಮಿಡಿ.. ಕೊನೆಯ 20 ನಿಮಿಷವಂತೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ ಎಂಬ ಭರವಸೆ ಕೊಟ್ಟಿದ್ದಾರೆ ಗಣೇಶ್.
ಚಿತ್ರದಲ್ಲಿ ಮೇಘಾ ಶೆಟ್ಟಿ ಡಾಕ್ಟರ್. ರಚನಾ ಇಂದರ್ ಹಠಮಾರಿ ಹುಡುಗಿ. ಸಾಯಿ ಕಾರ್ತಿಕ್ ಸಂಗೀತದಲ್ಲಿ ಯಟ್ಟಾಸಟ್ಟಾ.. ಹಾಡು ಈಗಾಗಲೇ ಹಿಟ್ ಆಗಿದೆ.