ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಕ್ರೇಜ್ ಕಿಂಚಿತ್ತೂ ಕಮ್ಮಿಯಾಗಿಲ್ಲ. ಇವತ್ತಿಗೂ ರಮ್ಯಾ ಎಂದರೆ ಥ್ರಿಲ್ಲಾಗುವವರಿಗೆ ರಮ್ಯಾ ಸ್ವೀಟ್ ಸುದ್ದಿಯನ್ನೂ ಕೊಟ್ಟು ಬೆನ್ನಲ್ಲೇ ಶಾಕ್ ಕೊಟ್ಟಿದ್ದರು. ಸ್ವತಃ ರಮ್ಯಾ ನಿರ್ಮಾಣ ಮಾಡುತ್ತಿರುವ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿ ಚಿತ್ರದಲ್ಲಿ ನಟಿಸೋದಾಗಿ ಹೇಳಿದ್ದರು. ರಿಷಬ್, ರಮ್ಯಾ ಸೇರಿ ಎಲ್ಲರೂ ಪಕ್ಕಾ ಎಂದಿದ್ದರು. ಸ್ವತಃ ತಾವೇ ಘೋಷಿಸಿಕೊಂಡಿದ್ದ ಚಿತ್ರವನ್ನು ಬಿಟ್ಟ ರಮ್ಯಾ ತಮ್ಮ ಜಾಗಕ್ಕೆ ಬೇರೊಬ್ಬರನ್ನು ಕರೆತಂದಿದ್ದರು. ಸಕುಟುಂಬ ಸಮೇತ ಚಿತ್ರದಲ್ಲಿ ನಟಿಸಿದ್ದ ಸಿರಿ ರವಿಕುಮಾರ್ ರಮ್ಯಾ ಸ್ಥಾನಕ್ಕೆ ರೀ-ಪ್ಲೇಸ್ ಆಗಿದ್ದರು. ಈಗ ಮತ್ತೊಮ್ಮೆ ಸುದ್ದಿಯೆದ್ದಿದೆ.
ರಮ್ಯಾ ಡಾಲಿ ಧನಂಜಯ್ ಜೊತೆಗಿನ ಉತ್ತರಕಾಂಡ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಲಿದ್ದಾರಂತೆ. ಡಾಲಿ ಧನಂಜಯ್ ನಟಿಸುತ್ತಿರುವ ಉತ್ತರಕಾಂಡ ಚಿತ್ರಕ್ಕೆ ನಾಳೆ ಅಂದರೆ ನವೆಂಬರ್ 6ರಂದು ಸ್ಕ್ರಿಪ್ಟ್ ಪೂಜೆಯಿಂದೆ. ಇದು ರತ್ನನ್ ಪ್ರಪಂಚ ಟೀಂ ಮತ್ತೊಮ್ಮೆ ಒಂದಾಗಿರೋ ಸಿನಿಮಾ. ಡಾಲಿ ಧನಂಜಯ್ ಜೊತೆ ಯೋಗಿ ಬಿ.ರಾಜ್ ಮತ್ತು ಕಾರ್ತಿಕ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ರೋಹಿತ್ ಪದಕಿ ನಿರ್ದೇಶಕರು. ಉತ್ತರ ಕರ್ನಾಟಕದಲ್ಲಿಯೇ ಬಹುತೇಕ ಶೂಟಿಂಗ್ ನಡೆಯಲಿದ್ದು ಚಿತ್ರತಂಡದಲ್ಲಿ ರಮ್ಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸುದ್ದಿ ಸತ್ಯವಾ ಸುಳ್ಳಾ ಅನ್ನೋದನ್ನ ತಿಳ್ಕೊಳ್ಳೋಕೆ ತುಂಬಾ ದಿನ ಕಾಯಬೇಕಿಲ್ಲ. ನಾಳೆಯ ಸ್ಕ್ರಿಪ್ಟ್ ಪೂಜೆ ಹೊತ್ತಿಗೆ ಚಿತ್ರತಂಡ ಅನೌನ್ಸ್ ಮಾಡುವ ಸಾಧ್ಯತೆಗಳಿವೆ. ಅಲ್ಲಿಯವರೆಗೂ ಕಾಯಬೇಕಷ್ಟೆ. ರಮ್ಯಾ ಅಂದ್ರೆ ಸೆನ್ಸೇಷನ್ ಕ್ರಿಯೇಟ್ ಮಾಡ್ತಾರೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.