ರಜನಿಕಾಂತ್ ಮತ್ತು ಡಾ.ರಾಜ್ ಕುಟುಂಬದ ಬಾಂಧವ್ಯ ಇಂದು ನಿನ್ನೆಯದಲ್ಲ. ರಜನಿ ಒಂದು ರೀತಿಯಲ್ಲಿ ರಾಜ್ ಕುಟುಂಬದ ಸದಸ್ಯರಿದ್ದಂತೆ. ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವಾಗ ಅಪ್ಪು ಕೆಲವು ಅಪ್ಪು ಅನುಭವಗಳನ್ನು ಬಿಚ್ಚಿಟ್ಟರು. ಅಂದಹಾಗೆ ಅಪ್ಪು ಹೀರೋ ಆಗಿ ನಟಿಸಿದ್ದ ಮೊದಲ ಚಿತ್ರ 100 ಡೇಸ್ ಹೋಗಲಿದೆ ಎಂದು ಹೇಳಿದ್ದವರು ರಜನಿ. ಎರಡು ದಶಕಗಳ ಹಿಂದೆ ಯಾವ ಅಪ್ಪುಗೆ 100 ಡೇಸ್ ಶೀಲ್ಡ್ ಕೊಟ್ಟರೋ.. ಅದೇ ಕೈಗಳಲ್ಲಿ ಅಪ್ಪುಗೆ ಮರಣೋತ್ತರ ಪುರಸ್ಕಾರವನ್ನೂ ಕೊಟ್ಟರು.
ಅಪ್ಪು ಚಿತ್ರವನ್ನು ರಿಲೀಸ್ ಆಗುವುದಕ್ಕೆ ಮುಂಚೆಯೇ ರಜನಿಕಾಂತ್ ನೋಡಿದ್ದರು. ಸಿನಿಮಾದಲ್ಲಿ ಅಪ್ಪು ಎಂಟ್ರಿ ಸೀನ್, ಫೈಟ್ಸ್, ಡ್ಯಾನ್ಸ್, ಆಕ್ಟಿಂಗ್ ಎಲ್ಲವೂ ಇಷ್ಟವಾಗಿತ್ತು. ಈ ಸಿನಿಮಾ 100 ಡೇಸ್ ಗ್ಯಾರಂಟಿ ಎಂದಿದ್ದರು ರಜನಿ. ಹಾಗಾದರೆ ಶತದಿನೋತ್ಸವಕ್ಕೆ ನೀವೇ ಬಂದು ಶೀಲ್ಡ್ ಕೊಡಬೇಕು ಎಂದಿದ್ದರಂತೆ ಡಾ.ರಾಜ್. ಅದರಂತೆಯೇ ಶತದಿನೋತ್ಸವ ಸಮಾರಂಭಕ್ಕೆ ಬಂದಿದ್ದ ರಜನಿಕಾಂತ್ ಶತದಿನೋತ್ಸವ ಫಲಕ ವಿತರಿಸಿ ಶುಭ ಕೋರಿದ್ದರು.
ಅಯ್ಯಪ್ಪ ಸ್ವಾಮಿ ಯಾತ್ರೆಯಲ್ಲಿ ಮೊದಲು ಅಪ್ಪುವನ್ನು ನೋಡಿದ್ದು. 1979ರಲ್ಲಿ. ಆಗ ಅಪ್ಪುಗೆ ಸುಮಾರು 4 ವರ್ಷ ಇರಬೇಕು. ಡಾ.ರಾಜ್ ಅಯ್ಯಪ್ಪ ಸ್ವಾಮಿ ಯಾತ್ರೆಗೆ ಬಾಲಕನನ್ನು ಕರೆದುಕೊಂಡು ಬರುತ್ತಿದ್ದರು. ನಮ್ಮಲ್ಲಿ ವೀರಸ್ವಾಮಿ ಸ್ವಾಮಿಯೇ.. ಹರಿಹರ ಸುತನೇ.. ಹೀಗೆಲ್ಲ ಹೇಳುತ್ತಿದ್ದರು. ನಾವೆಲ್ಲ ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನಬೇಕು. ಆಗ ಪುಟ್ಟದೊಂದು ಧ್ವನಿ ಕೇಳಿಸಿತು. ಆ ಧ್ವನಿ ಅಪ್ಪುನದ್ದಾಗಿತ್ತು. ಕಪ್ಪು ಬಣ್ಣದ ಹೊಳೆಯುವ ಕಣ್ಣುಗಳ ದೀಪದಂತಹ ಬಾಲಕ. ಅಣ್ಣಾವ್ರು ಅವನನ್ನು ಎತ್ತಿಕೊಂಡು 48 ಕಿ.ಮೀ. ಪಾದಯಾತ್ರೆ ಮಾಡಿದ್ದರು.
ಅಪ್ಪು ಮೃತಪಟ್ಟಾಗ ರಜನಿಕಾಂತ್ ಆಸ್ಪತ್ರೆಯಲ್ಲಿದ್ದರು. ಐಸಿಯುನಲ್ಲಿದ್ದರು. ರಜನಿಗೆ ಅಪ್ಪು ಸಾವಿನ ಸುದ್ದಿ ಹೇಳಿದ್ದು 3 ದಿನ ಆದ ಮೇಲೆ. ವಿಷಯ ಗೊತ್ತಾದಾಗ ನನಗೆ ನಂಬೋಕೂ ಆಗಲಿಲ್ಲ. ಅಪ್ಪುಗೆ 46 ವರ್ಷವಾಗಿತ್ತು ಎಂದು ಗೊತ್ತಾಗಿದ್ದೇ ಆಗ. 30-33 ಇರಬೇಕು ಎಂದುಕೊಂಡಿದ್ದೆ. ನಾನು ಆರೋಗ್ಯವಾಗಿದ್ದರೂ ಅಪ್ಪು ಸಾವಿನ ವೇಳೆ ಬರುತ್ತಿರಲಿಲ್ಲ. ನನಗೆ ಅಪ್ಪುವಿನ ಪುಟ್ಟ ಮಗುವಿನ ಚಿತ್ರಣ ಕಣ್ಣ ಮುಂದಿದೆ. ಆ ನೆನಪಲ್ಲೇ ಅವನು ಇರಲಿ ಎಂದರು ರಜನಿಕಾಂತ್.
1 ದಾಖಲೆಯನ್ನು ಮೀರಿ ನಿಂತಿದೆ. ಕೆಜಿಎಪ್ ಚಾಪ್ಟರ್ 1 ಹಿಂದಿಯಲ್ಲಿ 44 ಕೋಟಿ ಗಳಿಸಿತ್ತು. ಈಗ ಹಿಂದಿಯ ಕಾಂತಾರದ ಗಳಿಕೆ 45 ಕೋಟಿ ಮೀರಿ ನಿಂತಿದೆ. ಕನ್ನಡದಲ್ಲಿ ಕರ್ನಾಟಕದಲ್ಲಿ ಕೆಜಿಎಫ್ ಚಾಪ್ಟರ್ 2 ಗಳಿಕೆ 175 ಕೋಟಿಗಳಷ್ಟಿತ್ತು. ಈಗ ಅತ್ಯಂತ ಸಮೀಪಕ್ಕೆ ಬಂದಿದ್ದು ಈ ವಾರಾಂತ್ಯಕ್ಕೆ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನೂ ಅಳಿಸಿ ಹಾಕುವ ಹಾದಿಯಲ್ಲಿದೆ.