ಡಾಲಿ ಧನಂಜಯ್ ಹೆಡ್ ಬುಷ್ ಚಿತ್ರವೂ ಗೆದ್ದಿರುವ ಖುಷಿಯಲ್ಲಿಯೇ ಮತ್ತೆ ಕೆಲಸಕ್ಕಿಳಿದಿದ್ದಾರೆ. ಹೆಡ್ ಬುಷ್ ಚಿತ್ರದ ರಿಲೀಸ್ ಬ್ಯುಸಿಯಲ್ಲಿದ್ದ ಧನಂಜಯ್ ಕೆಲವು ದಿನಗಳಿಂದ ಚಿತ್ರೀಕರಣ ಸೇರಿದಂತೆ ಹಲವು ಚಟುವಟಿಕೆಗಳಿಗೆ ಬ್ರೇಕ್ ಕೊಟ್ಟಿದ್ದರು. ಈಗ ಎಲ್ಲವನ್ನೂ ಮುಗಿಸಿ ಕೆಲಸಕ್ಕೆ ಮುಂದಾಗಿದ್ದಾರೆ.
ಕೆಆರ್‍ಜಿ ಸ್ಟುಡಿಯೋಸ್‍ನ ಕಾರ್ತಿಕ್ ಗೌಡ, ಯೋಗಿ ಬಿ.ರಾಜ್ ಜೊತೆಗೂಡಿ ಸಿದ್ಧವಾಗುತ್ತಿರುವ ಸಿನಿಮಾ ಉತ್ತರಕಾಂಡ. ರೋಹಿತ್ ಪದಕಿ ನಿರ್ದೇಶನದ ಉತ್ತರಾಖಂಡಕ್ಕೆ ಮತ್ತೆ ವೇಗ ಸಿಕ್ಕಿದೆ. ನವೆಂಬರ್ 6ರಂದು ಶೂಟಿಂಗ್ ಶುರುವಾಗುತ್ತಿದೆ.
ಇನ್ನೊಂದೆಡೆ ಅವರದ್ದೇ ಹೊಯ್ಸಳ ಚಿತ್ರದ ಚಿತ್ರೀಕರಣವೂ ನವೆಂಬರ್ 7ರಿಂದ ಶುರುವಾಗುತ್ತಿದೆ. ಎನ್. ವಿಜಯ್ ನಿರ್ದೇಶನದ ಹೊಯ್ಸಳದ ಚಿತ್ರೀಕರಣವೂ ಶುರುವಾಗಲಿದೆ.