ರು ವರ್ಷಗಳ ಹಿಂದೆ ಮೊಘಲರ ದಾಳಿಯಲ್ಲಿ ನಜ್ಜುಗುಜ್ಜಾಗಿದ್ದ ಪುಣ್ಯಕ್ಷೇತ್ರವಿದು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಪುನರುಜ್ಜೀವನಗೊಂಡು ನಳನಳಿಸುತ್ತಿರುವ ಕ್ಷೇತ್ರ ವಾರಾಣಸಿ. ಇಂತಹ ಕ್ಷೇತ್ರದಲ್ಲಿ ಭಾರತ್ ಮಾತಾ ಮಂದಿರವಿದೆ. ಹೌದು, ಭಾರತ್ ಮಾತಾ ಮಂದಿರ.
ವಾರಾಣಸಿಯಲ್ಲಿ ಭಾರತ್‍ಮಾತಾ ಮಂದಿರವಿದೆ. ಅದು ಸಂಪೂರ್ಣ ಅಮೃತಶಿಲೆಯಲ್ಲಿ ಕೆತ್ತಿದ ಅಖಂಡ ಭಾರತದ ಭೂಪಟ. ಪ್ರತಿದಿನ ಅಲ್ಲಿ ಭೂಪಟಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಕಾಶಿಗೆ ಹೋಗುವ ಬಹುತೇಕರಿಗೆ ಆ ವಿಷಯವೇ ಗೊತ್ತಿಲ್ಲ. ನಮ್ಮ ಚಿತ್ರದಲ್ಲಿ ಅದನ್ನೂ ತೋರಿಸಿದ್ದೇವೆ ಎನ್ನುತ್ತಾರೆ ಬನಾರಸ್ ಚಿತ್ರದ ನಿರ್ದೇಶಕ ಜಯತೀರ್ಥ.
ಕಾಶಿ ಕಾರಿಡಾರ್ ಆಗುವುದಕ್ಕೂ ಮೊದಲು ಚಿತ್ರೀಕರಣಗೊಂಡಿದ್ದ ಸಿನಿಮಾ ಇದು. ಹಳೆಯ ಕಾಶಿಯ ಓಣಿಓಣಿಗಳನ್ನೂ ನೋಡಬಹುದು. ಚಿತ್ರಕ್ಕೊಂದು ಡಿವೈನ್ ಟಚ್ ಇದೆ. ಕಾಶಿಯಲ್ಲಿ ನಡೆಯುವ ಪ್ರೇಮಕಥೆಗೆ ಆ ಹಿನ್ನೆಲೆ ಬೇಕಿತ್ತು ಎನ್ನುತ್ತಾರೆ ಜಯತೀರ್ಥ. ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಹೀರೋ ಆಗಿ ನಟಿಸಿರುವ ಚಿತ್ರದಲ್ಲಿ ಸೋನಲ್ ಮಂಥೆರೋ ನಾಯಕಿ.