2022. ಇಡೀ ವರ್ಷ ಕನ್ನಡ ಚಿತ್ರರಂಗಕ್ಕೆ ಶುಭ ಸುದ್ದಿ. ಒಂದರ ಹಿಂದೊಂದು ಹಿಟ್ ಚಿತ್ರಗಳು ಬರುತ್ತಿವೆ. ಈಗ ಗಂಧಧ ಗುಡಿಯೂ ಹಿಟ್ ಸಿನಿಮಾ ಲಿಸ್ಟಿಗೆ ಸೇರಿದೆ. ಅಂದಹಾಗೆ ಈ ವರ್ಷ ಅತೀ ಹೆಚ್ಚು ಮೆಗಾ ಹಿಟ್ ಕೊಟ್ಟ ಸಂಸ್ಥೆ ಹೊಂಬಾಳೆ. ಅದರಲ್ಲಿ ಅನುಮಾನವಿಲ್ಲ. ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಈ ವರ್ಷದ ಬ್ಲಾಕ್ ಬಸ್ಟರ್ಸ್. ಡಿವೈನ್ ಹಿಟ್ ಸಿನಿಮಾಗಳು.
2021ರಲ್ಲಿ ಕೂಡಾ ಯುವರತ್ನ, ಬಡವ ರಾಸ್ಕಲ್, ಗರುಡ ಗಮನ ವೃಷಭ ವಾಹನ, ತೆಲುಗಿನ ವಕೀಲ್ ಸಾಬ್ ಚಿತ್ರಗಳನ್ನು ವಿತರಣೆ ಮಾಡಿತ್ತು. ಎಲ್ಲವೂ ಸೂಪರ್ ಹಿಟ್.
2022ರಲ್ಲಿ ಕೆಜಿಎಫ್ 2 ಚಿತ್ರವನ್ನು ನಿರ್ಮಿಸಿದ್ದು ಹೊಂಬಾಳೆಯೇ ಆದರೂ ಕರ್ನಾಟಕದಲ್ಲಿ ಅದನ್ನು ವಿತರಣೆ ಮಾಡಿದ್ದು ಕೆಆರ್ಜಿ ಸ್ಟುಡಿಯೋಸ್. ಕಾರ್ತಿಕ್ ಗೌಡ ಅವರ ಸಂಸ್ಥೆ. ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ 2, ಕೆಜಿಎಫ್ ಚಾಪ್ಟರ್ 2, ರಕ್ಷಿತ್ ಬ್ಯಾನರ್ನ ಸಕುಟುಂಬ ಸಮೇತ, 777 ಚಾರ್ಲಿ, ಕಾಂತಾರ ಮತ್ತೀಗ ಪುನೀತ್ ರಾಜಕುಮಾರ್ ಅವರ ಗಂಧದ ಗುಡಿ ಚಿತ್ರಗಳನ್ನು ವಿತರಣೆ ಮಾಡಿದ್ದು ಕೂಡಾ ಕೆಆರ್ಜಿ ಸ್ಟುಡಿಯೋಸ್.
ಇವುಗಳಲ್ಲಿ ಗಂಧದ ಗುಡಿ ಇದೀಗ ತಾನೇ ರಿಲೀಸ್ ಆಗಿದೆ. ಕೆಜಿಎಫ್ ಚಾಪ್ಟರ್ 2 ಬಾಕ್ಸಾಫೀಸಿನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ಕಾಂತಾರ 200 ಕೋಟಿ ಕ್ಲಬ್ ಸೇರಿದೆ. 777 ಚಾರ್ಲಿ ಕೂಡಾ 100 ಕೋಟಿಗೂ ಹೆಚ್ಚು ಗಳಿಸಿದ ಸಿನಿಮಾ. ಒಟ್ಟಿನಲ್ಲಿ ಈ ವರ್ಷವೂ ಕೆಆರ್ಜಿ ಸ್ಟುಡಿಯೋಸ್ ಸೂಪರ್ ಸಕ್ಸಸ್.