` ಕಾಂತಾರ ಮೆಚ್ಚಿದ ರಜನಿಕಾಂತ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕಾಂತಾರ ಮೆಚ್ಚಿದ ರಜನಿಕಾಂತ್
ಕಾಂತಾರ ಮೆಚ್ಚಿದ ರಜನಿಕಾಂತ್

ಕಾಂತಾರ ಚಿತ್ರವನ್ನು ನೋಡಿ ಮೆಚ್ಚಿದವರ ಸಾಲಿಗೀಗ ಸೂಪರ್ ಸ್ಟಾರ್ ರಜನಿಕಾಂತ್ ಕೂಡಾ ಸೇರಿದ್ದಾರೆ. ಸಿನಿಮಾ ನೋಡಿ ರೋಮಾಂಚನವಾಯಿತು ಎಂದು ಬರೆದುಕೊಂಡಿದ್ದಾರೆ.

ಎಲ್ಲ ತಿಳಿದುಕೊಂಡಿರುವುದಕ್ಕಿಂತ ತಿಳಿದುಕೊಳ್ಳದೇ ಇರುವುದು ಹೆಚ್ಚಿರುತ್ತದೆ. ಬಹುಶಃ ಇದಕ್ಕಿಂತ ಒಳ್ಳೆಯ ಸಿನಿಮಾ ಮತ್ತೊಂದಿಲ್ಲ. ಇದಕ್ಕಾಗಿ ಹೊಂಬಾಳೆ ಫಿಲಂಸ್ ಹಾಗೂ ರಿಷಬ್ ಶೆಟ್ಟಿಯವರಿಗೆ ಧನ್ಯವಾದಗಳು.  ಈ ಚಿತ್ರ ಮೈ ನವಿರೇಳಿಸುವಂತೆ ಮಾಡಿದೆ. ರಿಷಬ್ ಅವರೇ, ಒಬ್ಬ ನಟನಾಗಿ, ಚಿತ್ರ ಸಾಹಿತಿಯಾಗಿ ಹಾಗೂ ಒಬ್ಬ ನಿರ್ದೇಶಕನಾಗಿ ನಿಮಗೆ ಹಾಗೂ ನಿಮ್ಮ ಇಡೀ ತಂಡಕ್ಕೆ ಹ್ಯಾಟ್ಸಾಫ್ ಎಂದಿದ್ದಾರೆ ರಜನಿಕಾಂತ್.

ಸಹಜವಾಗಿಯೇ ರಿಷಬ್ ಶೆಟ್ಟಿಗೆ ರಜನಿಕಾಂತ್ ಮೆಚ್ಚುಗೆ ಖುಷಿ ಕೊಟ್ಟಿದೆ. ರಿಷಬ್ ಶೆಟ್ಟಿ, ಸಪ್ತಮಿಗೌಡ, ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ, ಚೆಲುವೇಗೌಡ.. ಹೀಗೆ ಚಿತ್ರತಂಡದ ಪ್ರತಿಯೊಬ್ಬರೂ ರಜನಿಕಾಂತ್ ಮೆಚ್ಚುಗೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ರಜನಿ ಸರ್, ನೀವು ಭಾರತದ ಸೂಪರ್ ಸ್ಟಾರ್. ನಾನು ಬಾಲ್ಯದಿಂದಲೂ ನಿಮ್ಮ ಅಭಿಮಾನಿ. ನಿಮ್ಮ ಈ ಮೆಚ್ಚುಗೆ ನನ್ನ ಬಹುದಿನದ ಕನಸೊಂದನ್ನು ನನಸು ಮಾಡಿಸಿದೆ. ಇನ್ನು ಮುಂದೆ ನಾನು ಮತ್ತಷ್ಟು ಸ್ಥಳೀಯ ಕಥೆಗಳನ್ನು ಆಧರಿಸಿದ ಚಿತ್ರಗಳನ್ನು ಮಾಡಲು, ಆ ಮೂಲಕ ನಮ್ಮ ಪ್ರೇಕ್ಷಕರನ್ನು  ಸ್ಫೂರ್ತಿಗೊಳಿಸುವ ಚಿತ್ರಗಳನ್ನು ಮಾಡುವಂತೆ ಸ್ಫೂರ್ತಿ ನೀಡಿದೆ ಎಂದಿದ್ದಾರೆ.

ದೇಶದ ಅತಿದೊಡ್ಡ ಸೂಪರ್ ಸ್ಟಾರ್ ಮೆಚ್ಚುಗೆ ಸಿಕ್ಕಿದ್ದು ಎನರ್ಜಿ ಬೂಸ್ಟ್ ಕೊಟ್ಟಂತಾಗಿದೆ. ಅವರ ಬಗ್ಗೆ ಮಾತನಾಡಲು ನಾನು ಚಿಕ್ಕವಳು. ಥ್ಯಾಂಕ್ಯೂ ಸರ್ ಎಂದಿದ್ದಾರೆ ಸಪ್ತಮಿ ಗೌಡ.

ನಿಮ್ಮ ಈ ಮೆಚ್ಚುಗೆ ನಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದವು ಎಂದು ಟ್ವೀಟ್ ಮಾಡಿದೆ ಹೊಂಬಾಳೆ ಸಂಸ್ಥೆ. ರಜನಿಕಾಂತ್ ಮೆಚ್ಚುಗೆ ಪಡೆಯಲು ನಾವು ಪುಣ್ಯ ಮಾಡಿದ್ದೆವು ಎನ್ನುವುದು ವಿಜಯ್ ಕಿರಗಂದೂರು ಮಾತು. ದಂತಕಥೆಗೆ ದಂತಕಥೆಯ ಮೆಚ್ಚುಗೆ ಸಿಕ್ಕಿದೆ ಎಂದಿದ್ದಾರೆ ಚೆಲುವೇಗೌಡ. ಥ್ರಿಲ್ಲಾಗಿದ್ದೇನೆ ಎಂದಿದ್ದಾರೆ ಕಾರ್ತಿಕ್ ಗೌಡ. ಒಟ್ಟಿನಲ್ಲಿ ದಂತಕಥೆಯ ಮೆಚ್ಚುಗೆಗೆ ದಂತಕಥೆ ಚಿತ್ರತಂಡವೇ ಪ್ರೀತಿಯಿಂದ ಶರಣಾಗಿದೆ.