ಕನ್ನಡದ ಜೋಶ್, 100, ರಾಧನ್ ಗಂಡ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ನಟಿ ಪೂರ್ಣಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೂರ್ಣಾ ಕನ್ನಡ, ಮಲಯಾಳಂ, ತಮಿಳು, ತೆಲುಗಿನಲ್ಲಿ ನಟಿಸಿದ್ದವರು. ಮೂಲತಃ ಮಲೆಯಾಳಿ. ತೆಲುಗಿನಲ್ಲಿ ಹೆಚ್ಚು ಫೇಮಸ್ ಆಗಿದ್ದ ನಟಿ. ಹಲವು ವರ್ಷಗಳಿಂದ ತಾವು ಪ್ರೀತಿಸುತ್ತಿದ್ದ ದುಬೈ ಮೂಲದ ಉದ್ಯಮಿ ಶನದ್ ಆಸಿಫ್ ಅಲಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪೂರ್ಣ ಅವರ ಮೂಲ ಹೆಸರು ಶಮ್ನಾ ಕಾಸಿಮ್. ತಮ್ಮ ಪ್ರೀತಿಯ ಆಸಿಫ್ ಅಲಿ ಕುರಿತು ಪ್ರೀತಿಯನ್ನು ಹಂಚಿಕೊಂಡಿರುವ ಪೂರ್ಣಾ ತಮ್ಮನ್ನು ಇರುವಂತೆಯೇ ಒಪ್ಪಿಕೊಂಡ, ತಮ್ಮನ್ನು ಬದಲಿಸಲು ಪ್ರಯತ್ನಿಸದ ಹಾಗೂ ತಮಗೆ ಆತ್ಮವಿಶ್ವಾಸ ತುಂಬಿದ ಪತಿ ಆಸಿಫ್ ಅಲಿಯನ್ನು ಶಾಶ್ವತವಾಗಿ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.