ಕಾಂತಾರ ಸೃಷ್ಟಿಸಿರುವ ಸಂಚಲನಕ್ಕೆ ಇಡೀ ಇಂಡಿಯನ್ ಚಿತ್ರಪ್ರೇಮಿಗಳಷ್ಟೇ ಅಲ್ಲ, ಚಿತ್ರರಂಗವೂ ಬೆರಗಾಗಿ ನೊಡುತ್ತಿದೆ. ದೈವೀಕ ಸಿನಿಮಾಗಳಿಗೆ ಇವತ್ತಿಗೂ ಪ್ರೇಕ್ಷಕರಿದ್ದಾರಾ ಎಂಬುದು ಜನರನ್ನು ಕಾಡುತ್ತಿರುವ ಪ್ರಶ್ನೆ. ಸರಿಯಾಗಿ ತೋರಿಸಿದ್ರೆ ಒಳ್ಳೆಯ ಸಿನಿಮಾ ತೋರಿಸಿದ್ರೆ ಇವತ್ತಿಗೂ ಜನ ಮೆಚ್ಚಿಕೊಳ್ತಾರೆ. ನೋಡ್ತಾರೆ ಅನ್ನೋದನ್ನು ಕಾಂತಾರ ಸಾಬೀತು ಮಾಡಿದೆ. ಕರ್ನಾಟಕದಲ್ಲಂತೂ ಬಿಡಿ, ಇನ್ನು ನಮ್ಮ ನೆಲದ ಕಥೆ. ನೋಡಿಲ್ಲದವರಿಗೂ ಕೇಳಿಯಾದರೂ ಗೊತ್ತಿರುತ್ತೆ. ಆದರೆ ಹಿಂದಿಯವರಿಗೆ.. ಸೌಥ್ ಸಿನಿಮಾಗಳೆಂದರೆ ಏನೋ ಮಾಡ್ತಾರೆ ಎಂಬಂತೆ ನೋಡುತ್ತಿದ್ದವರಿಗೆ ಹೀಗೂ ಮಾಡ್ತಾರಾ ಎಂದು ಅಚ್ಚರಿ ಪಡುವಂತೆ ಸಿನಿಮಾ ಮಾಡಿದ್ದಾರೆ. ಒನ್ಸ್ ಎಗೇನ್ ಕಾಂತಾರ.
ಈಗಾಗಲೇ ಕಾಂತಾರ ಚಿತ್ರ ನೋಡಿ ಮಧುರ್ ಭಂಡಾರ್‍ಕರ್, ರಾಮ್ ಗೋಪಾಲ್ ವರ್ಮಾ ಮೊದಲಾದ ದಿಗ್ಗಜ ನಿರ್ದೇಶಕರು ಮೆಚ್ಚಿದ್ದಾರೆ. ಚಿತ್ರದ ಬಗ್ಗೆ ಕೇಳುತ್ತಿದ್ದೇನೆ. ಬಿಡುವಾದ ತಕ್ಷಣ ನೋಡುತ್ತೇನೆ ಎಂದು ಹೇಳಿದ್ದರು ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್. ಈಗ ಸಿನಿಮಾ ನೋಡಿದ್ದಾರೆ.
ವ್ಹೋವ್.. ಈಗಷ್ಟೇ ಕುಟುಂಬದೊಂದಿಗೆ ಸಿನಿಮಾ ನೋಡಿ ಬಂದೆ. ಈ ಹ್ಯಾಂಗೋವರ್‍ನಿಂದ ಹೊರಬರಲು ನನಗೆ ಇನ್ನೂ ಒಂದು ವಾರ ಸಮಯ ಬೇಕು. ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತಿದೆ. ಡೈರೆಕ್ಟರ್ ರಿಷಬ್ ಶೆಟ್ಟಿಯವರೇ ಹ್ಯಾಟ್ಸಾಫ್. ಕಥೆಗಾರ ರಿಷಬ್ ಶೆಟ್ಟಿಯವರೇ ಹ್ಯಾಟ್ಸಾಫ್. ನಟ ರಿಷಬ್ ಶೆಟ್ಟಿಯವರೇ ಹ್ಯಾಟ್ಸಾಫ್. ಚಿತ್ರದ ಆಕ್ಷನ್, ಆಕ್ಟಿಂಗ್, ಮ್ಯೂಸಿಕ್, ಅಭಿನಯ.. ಎಲ್ಲವೂ ಬ್ರಿಲಿಯಂಟ್.. ಎಂದು ಚಿತ್ರದ ಬಗ್ಗೆ ಎಕ್ಸೈಟ್ ಆಗಿ ಮಾತನಾಡಿದ್ದಾರೆ ಕಂಗನಾ.
ಭಾರತೀಯ ಸಂಪ್ರದಾಯ, ಜನಪದ, ಇಲ್ಲಿನ ನೆಲದ ನಂಬಿಕೆ, ಸಮಸ್ಯೆಗಳನ್ನು ಚೆಂದದ ಕಥೆಯೊಂದಿಗೆ ಸಿನಿಮಾಗೆ ತಂದಿದ್ದೀರಿ. ಚಿತ್ರಮಂದಿರದಲ್ಲಿದ್ದ ಪ್ರತಿಯೊಬ್ಬರೂ ಇಂಥ ಅನುಭವ ಹಿಂದೆಂದೂ ಆಗಿರಲಿಲ್ಲ ಎಂದು ಥ್ರಿಲ್ ಆಗಿದ್ದರು ಎಂದಿದ್ದಾರೆ. ಕಂಗನಾ ರಣಾವತ್ ಅಭಿನಂದನೆಗೆ ಧನ್ಯವಾದ ಅರ್ಪಿಸಿದೆ ಕಾಂತಾರ ಟೀಂ.