` ಶಿವಣ್ಣ-ಉಪ್ಪಿ ಚಿತ್ರಕ್ಕೆ ರಾಜ್ ಬಿ.ಶೆಟ್ಟಿ ಪ್ರವೇಶ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಶಿವಣ್ಣ-ಉಪ್ಪಿ ಚಿತ್ರಕ್ಕೆ ರಾಜ್ ಬಿ.ಶೆಟ್ಟಿ ಪ್ರವೇಶ
ಶಿವಣ್ಣ-ಉಪ್ಪಿ ಚಿತ್ರಕ್ಕೆ ರಾಜ್ ಬಿ.ಶೆಟ್ಟಿ ಪ್ರವೇಶ

ಓಂ, ಪ್ರೀತ್ಸೆ ಹಾಗೂ ಲವಕುಶ ನಂತರ ಉಪ್ಪಿ ಮತ್ತು ಶಿವಣ್ಣ ಕಾಂಬಿನೇಷನ್‍ನ 4ನೇ ಸಿನಿಮಾ ಅದು. ಸದ್ಯಕ್ಕೆ 45ನೇ ಟೈಟಲ್‍ನಲ್ಲಿ ಲಾಂಚ್ ಆಗಿರುವ ಸಿನಿಮಾ ಈ ಕಾರಣಕ್ಕೇ ಸದ್ದು ಮಾಡುತ್ತಿದೆ. ಉಪ್ಪಿ-ಶಿವಣ್ಣ ಕಾಂಬಿನೇಷನ್‍ನ ಮೊದಲ ಸಿನಿಮಾದಲ್ಲಿ ಉಪ್ಪಿ ಡೈರೆಕ್ಟರ್. ಶಿವಣ್ಣ ಹೀರೋ. ಓಂ ಇಂಡಸ್ಟ್ರಿಯಲ್ ಹಿಟ್. ನಂತರ ಒಟ್ಟಿಗೇ ಸೇರಿದ್ದು ಪ್ರೀತ್ಸೆಯಲ್ಲಿ. ಇಬ್ಬರೂ ಹೀರೋಗಳೇ. ಸಿನಿಮಾ ಸೂಪರ್ ಹಿಟ್. 3ನೇ ಚಿತ್ರವೇ ಲವಕುಶ. ಫ್ಲಾಪ್ ಸಿನಿಮಾ. ಆದರೆ ಈಗಿನ ಕಥೆಯೇ ಬೇರೆ.

ಸಂಗೀತ  ನಿರ್ದೇಶಕ ಅರ್ಜುನ್ ಜನ್ಯ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಗಾಳಿಪಟ 2 ಖ್ಯಾತಿಯ ರಮೇಶ್ ರೆಡ್ಡಿ ನಿರ್ಮಾಪಕರಾಗಿದ್ದಾರೆ. ಈ ಚಿತ್ರಕ್ಕೆ ರಾಜ್ ಬಿ.ಶೆಟ್ಟಿ ಜಾಯಿನ್ ಆಗಿದ್ದಾರೆ. ರಾಜ್ ಬಿ.ಶೆಟ್ಟಿ ಈಗಿನ ಸೆನ್ಸೇಷನ್. ಸಿನಿಮಾ ಸೆಟ್ಟೇರುವ ಸಮಯ ಹತ್ತಿರವಾದಂತೆ ಸೆನ್ಸೇಷನ್ ಶುರುವಾಗುತ್ತಿದೆ