` ಹೆಡ್ ಬುಷ್ ಚಿತ್ರವನ್ನ ಯಾವ ಕಾರಣಕ್ಕೆ ನೋಡಬೇಕು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹೆಡ್ ಬುಷ್ ಚಿತ್ರವನ್ನ ಯಾವ ಕಾರಣಕ್ಕೆ ನೋಡಬೇಕು?
Head Bush Movie Image

ಹೆಡ್ ಬುಷ್. ಈಗ ಚಿತ್ರಮಂದಿರದಲ್ಲಿರೋ ಸಿನಿಮಾ. ಡಾಲಿ, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ ಪ್ರಧಾನ ಪಾತ್ರದಲ್ಲಿರೋ ಸಿನಿಮಾ. ಚಿತ್ರದ ಟ್ರೇಲರ್ ಅದ್ಧೂರಿಯಾಗಿದೆ. ಟ್ರೇಲರ್ ರಿಲೀಸ್ ಆದ ನಂತರ ಚಿತ್ರದ ಬಗ್ಗೆ ಇದ್ದ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಶೂನ್ಯ ನಿರ್ದೇಶನದ ಸಿನಿಮಾ ಹವಾ ಸೃಷ್ಟಿಸಿದೆ. ಇಷ್ಟಕ್ಕೂ ಚಿತ್ರವನ್ನು ನಾವ್ಯಾಕೆ ನೋಡಬೇಕು ಎಂಬುದಕ್ಕೆ ಕಾರಣಗಳ ಪಟ್ಟಿಯೇ ಇದೆ.

70ರ ದಶಕದ ಮೊದಲ ಡಾನ್ ಎಂಪಿ ಜೈರಾಜ್. ಒಂದು ಸರ್ಕಾರವನ್ನೇ ಅಲುಗಾಡಿಸುವಷ್ಟು ಶಕ್ತಿಶಾಲಿಯಾಗಿದ್ದ. ಅಂತಹ ಒಬ್ಬ ಡಾನ್ ಹುಟ್ಟಿದ್ದು ಹೇಗೆ? ಸಾಮಾನ್ಯನಾಗಿದ್ದ ಜೈರಾಜನಿಗೆ ಡಾನ್ ಆಗಿ ಜನ್ಮ ಕೊಟ್ಟವರಾರು? ಅದು ದೇವರಾಜ ಅರಸು ಕಾಲದ ಕಥೆಯನ್ನು, ಅವರ ವೈಫಲ್ಯವನ್ನೂ ಹೇಳುತ್ತದೆ.

ಒಬ್ಬ ಡಾನ್ ಯಾರಿಂದ ಹುಟ್ತಾನೆ, ಬೆಳೀತಾನೆ ಅನ್ನೋದು ಜನರಿಗೆ ಗೊತ್ತಾಗಬೇಕು. ಕೇವಲ ಹುಂಬತನವಷ್ಟೇ ಇದ್ದ ಜೈರಾಜ ಎಂಬ ರೌಡಿ ಸರ್ಕಾರದ ಮಂತ್ರಿಗಳ, ಮುಖ್ಯಮಂತ್ರಿಗಳ, ಅಧಿಕಾರಿಗಳ ಸಂಪರ್ಕಕ್ಕೆ ಹೇಗೆ ಬಂದ. ಯಾವ ರೀತಿ ಬಳಕೆಯಾದ. ಇಂದಿರಾ ಗಾಂಧಿಗೂ ಇವನ ಪರಿಚಯವಾಗಿದ್ದು ಹೇಗೆ? ಗೊತ್ತಾಗಬೇಕು.

70ರ ದಶಕದ ಕಥೆಯಲ್ಲಿ ಕೇವಲ ರಕ್ತಸಿಕ್ತ ಅಧ್ಯಾಯವಷ್ಟೇ ಅಲ್ಲ, ಬೆಂಗಳೂರಿನ ಕರಗವನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ಇನ್ಣೂ ಕಾಂತಾರದ ದೈವಾರಾಧನೆಯ ಗುಂಗಿನಿಂದ ಹೊರಬಂದಿಲ್ಲದ ಜನರಿರೆ ಕರಗದ ವೈಭವದ ದರ್ಶನವಾಗಲಿದೆ.

ಅಗ್ನಿ ಶ್ರೀಧರ್ ಚಿತ್ರಕಥೆ ಮತ್ತು ಸಂಭಾಷಣೆ. ಶೂನ್ಯ ನಿರ್ದೇಶನ. ಮಾಜಿ ರೌಡಿಯಾಗಿದ್ದರೂ ರಕ್ತವನ್ನು ಭಯಂಕರವಾಗಿ ತೋರಿಸುವುದರ ವಿರುದ್ಧವಾಗಿರೋದು ಅಗ್ನಿ ಶ್ರೀಧರ್. ಈ ಹಿಂದೆ ಅದೇ ರೀತಿ ಚಿತ್ರಗಳನ್ನು ತೋರಿಸಿದ್ದಾರೆ. ಹೀಗಾಗಿ ಮುಜುಗರವಾಗದಂತೆ ಸಿನಿಮಾ ನೋಡಬಹುದು ಎಂಬ ನಿರೀಕ್ಷೆಯೂ ಇದೆ.

ಹೀಗೆ  ಸಿನಿಮಾ ನೋಡೋಕೆ ಹಲವು ಕಾರಣಗಳಿವೆ.