` ದೈವಾರಾಧನೆ ಮಾಡುವವರಿಗೆ ಮಾತ್ರ ಮಾತನಾಡುವುದಕ್ಕೆ ಅರ್ಹತೆ ಇದೆ : ರಿಷಬ್ ಶೆಟ್ಟಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ದೈವಾರಾಧನೆ ಮಾಡುವವರಿಗೆ ಮಾತ್ರ ಮಾತನಾಡುವುದಕ್ಕೆ ಅರ್ಹತೆ ಇದೆ : ರಿಷಬ್ ಶೆಟ್ಟಿ
Rishab Shetty Image

ಭೂತಕೋಲ, ದೈವಾರಾಧನೆ ಹಿಂದೂಗಳದ್ದಲ್ಲ. ಹಿಂದೂ ಸಂಸ್ಕøತಿಯನ್ನು ಕಾಂತಾರ ಚಿತ್ರದಲ್ಲಿ ಹೇರಿಕೆ ಮಾಡಲಾಗಿದೆ. ಅದು ಮೂಲನಿವಾಸಿಗಳ ಬುಡಕಟ್ಟು ಜನರ ಆಚರಣೆ. ಕಾಂತಾರ ಸಿನಿಮಾದಲ್ಲಿ ಹಿಂದೂ ಧರ್ಮದ ವೈದಿಕ ಬ್ರಾಹ್ಮಣ್ಯ ಅಂಶಗಳನ್ನು ತುರುಕಲಾಗಿದೆ... ಇಂತಹ ವಾದಗಳನ್ನು ಮುಂದಿಟ್ಟು ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದರು ಆ ದಿನಗಳು ನಟ ಚೇತನ್. ಇದಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಟೀಕೆ ಮಾಡಿದ್ದರಾದರೂ ಒಂದು ಹಂತದ ಖ್ಯಾತನಾಮರಾರೂ ಮಾತನಾಡಿರಲಿಲ್ಲ. ಹೀಗಾಗಿಯೇ ಚೇತನ್ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಸಿನಿಮಾ ನೋಡಿ ಮೆಚ್ಚಿದವರು ಚೇತನ್ ವಿರುದ್ಧ ಹಿಗ್ಗಾಮುಗ್ಗ ಝಾಡಿಸಿದ್ದರು.

ಚಿತ್ರ ತಂಡದ ಸದಸ್ಯರಾದ ಗುರುವ ಪಾತ್ರಧಾರಿ ಸೂರಜ್ ಶೆಟ್ಟಿ, ರಿಷಬ್ ಶೆಟ್ಟಿಯವರ ತಂದೆ, ದೈವನರ್ತನದ ಸೂಕ್ಷ್ಮಗಳನ್ನು ಹೇಳಿಕೊಟ್ಟಿದ್ದ ಮುಕುಂದ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮೊದಲಾದವರು ಚೇತನ್‍ನ್ನು ಹಿಗ್ಗಾಮುಗ್ಗ ಜಾಡಿಸಿದ್ದರು. ಈಗ ರಿಷಬ್ ಶೆಟ್ಟಿಯವರೇ ಚೇತನ್ ಮಾತಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಭೂತಕೋಲ, ದೈವಾರಾಧನೆಯನ್ನು ಬಾಲ್ಯದಿಂದಲೇ ನೋಡಿಕೊಂಡು ಬೆಳದವನು ನಾನು. ಅಂಥಾದ್ದೊಂದು ಕಥೆ ಮಾಡುವಾಗ ಸಿನಿಮಾ ಮಾಡುವಾಗ ಏನೇನೆಲ್ಲ ಮುಂಜಾಗ್ರತೆ ತೆಗೆದುಕೊಳ್ಳಬೇಕೋ.. ತೆಗೆದುಕೊಂಡಿದ್ದೇವೆ. ಯಾರಿಗೂ ನೋವಾಗದಂತೆ ಸಿನಿಮಾ ಇರಬೇಕು ಎಂದು ನಾನು ಬಯಸಿದ್ದೆ. ಇದನ್ನು ಆರಾಧಿಸುವವರಿಗೆ, ನಾವು ದೈವ ದೇವಾದಿಗಳನ್ನು ಲೋಪವಾಗದಂತೆ ಸಿನಿಮಾ ಮಾಡಬೇಕು ಎನ್ನುವುದು ನನ್ನ ಅಪೇಕ್ಷೆಯಾಗಿತ್ತು. ಅದಕ್ಕೆಂದೇ ನಾನು ಹಿರಿಯರನ್ನು, ದೈವಾರಾಧಕರನ್ನು ಜೊತೆಯಲ್ಲಿಟ್ಟುಕೊಂಡೇ ಸಿನಿಮಾ ಚಿತ್ರೀಕರಿಸಿದ್ದೆವು ಎಂದಿದ್ದಾರೆ.

ನನಗೆ ಸಂಸ್ಕøತಿಯ ಬಗ್ಗೆ ಮಾತನಾಡುವಷ್ಟು ಗೊತ್ತಿಲ್ಲ. ಸಂಸ್ಕøತಿಯ ಬಗ್ಗೆ ಮಾತನಾಡುವುದಕ್ಕೆ ದೊಡ್ಡ ಅರ್ಹತೆ ಬೇಕು. ನನಗೆ ಆ ಅರ್ಹತೆ ಇಲ್ಲ. ಟೀಕಿಸಿದವರಿಗೂ ಆ ಅರ್ಹತೆ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಚೇತನ್ ಟೀಕೆಗೆ ಉತ್ತರಿಸಬೇಕಾದವರು ಉತ್ತರಿಸುತ್ತಾರೆ. ದೈವಾರಾಧಕರನ್ನು ಬೇರೆ ಯಾರಿಗೂ ಟೀಕಿಸುವ ಅರ್ಹತೆ ಇಲ್ಲ ಎಂದಿದ್ದಾರೆ ರಿಷಬ್ ಶೆಟ್ಟಿ. ಚಿತ್ರಕ್ಕಾಗಿ ಶ್ರಮ ಹಾಕಿದ್ದೇವೆ. ರಕ್ತ ಸುರಿಸಿದ್ದೇವೆ. ಎಲ್ಲವನ್ನೂ ವೀಕ್ಷಕರಿಗೆ ಬಿಟ್ಟಿದ್ದೇವೆ. ಪ್ರತಿಫಲವೂ ಸಿಗುತ್ತಿದೆ ಎಂದು ಸಿನಿಮಾ ಯಶಸ್ಸಿನ ಬಗ್ಗೆ ಖುಷಿಯಾಗಿ ಮಾತನಾಡಿದ್ದಾರೆ ರಿಷಬ್ ಶೆಟ್ಟಿ.