ಗುರುವ, ಕಾಂತಾರದಲ್ಲಿ ಶಿವನ ಅಣ್ಣ. ವಂಶಪಾರಂಪರಿಕವಾಗಿ ಶಿವ ಮಾಡಬೇಕಿದ್ದ ದೈವನರ್ತಕನ ಪದ್ಧತಿಯನ್ನು ಗುರುವ ಮುಂದುವರೆಸುತ್ತಿರುತ್ತಾನೆ. ಗುರುವನನ್ನು ತುಂಬಾ ಪ್ರೀತಿಸುವ, ತರಲೆ ತುಂಟತನ ಮಾಡಿಕೊಂಡಿರುತ್ತಿದ್ದ ತಮ್ಮ ಶಿವ ಗುರುವನ ಕೊಲೆಯ ನಂತರ ಧಣಿಯ ವಿರುದ್ಧವೇ ಸಿಡಿದೇಳುತ್ತಾನೆ. ರಿಷಬ್ ಶೆಟ್ಟಿಗೂ ಮೊದಲು ಪಂಜುರ್ಲಿಯಾಗಿ ಗುರುವನ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ ಸ್ವರಾಜ್ ಶೆಟ್ಟಿ. ಅಂತಹ ಸ್ವರಾಜ್ ಶೆಟ್ಟಿ ಚೇತನ್ ಟೀಕೆಗೆ ಕಿಡಿಯಾಗಿದ್ದಾರೆ.
ನಮ್ಮ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡಬೇಡಿ. ನಮ್ಮ ಪೂರ್ವಜರು ಹೇಳಿದ್ದನ್ನು ನಾವು ಮಾಡಿಕೊಂಡು ಬರ್ತಾ ಇದೀವಿ. ದೈವಾರಾಧನೆ ಮತ್ತು ಕಾಂತಾರದ ವಿಷಯ ಬೇಡ. ಸಿನಿಮಾ ಸಿನಿಮಾವಾಗಿ ಇರಲಿ. ನಟರಾಗಿ ಸಿನಿಮಾ ನೋಡಿ. ಖುಷಿ ಪಡಲಿ. ಅದು ಬಿಟ್ಟು ಇಲ್ಲದ್ದನ್ನು ಹೇಳಿ ಬೇಳೆ ಬೇಯಿಸಿ ಕೊಳ್ಳುವ ಕೆಲಸ ಬೇಡ ಎಂದಿದ್ದಾರೆ.
ಶಿವದೂತ ಗುಳಿಗ ಅನ್ನೋ ನಾಟಕದ ಕಥೆ ಒಂದು ಶಕ್ತಿಯ ಕಥೆ. ಗುಳಿಗನ ಕಥೆಯನ್ನ ಜನರ ಮುಂದೆ ತೆರೆದಿಡೋ ಕೆಲಸ ನಾವು ಮಾಡಿದ್ದೇವೆ. ಧರ್ಮವನ್ನ ಹಾಳು ಮಾಡೋರನ್ನ ಈ ದೈವಗಳು ಬಿಡಲ್ಲ. ಕರಾವಳಿಯ ಎಲ್ಲಾ ದೈವಗಳು ಇದೇ ರೀತಿ ಮಾಡುತ್ತವೆ. ದೈವಗಳು ಭೂಮಿಯಲ್ಲಿ ಇರೋದೇ ಧರ್ಮ ರಕ್ಷಣೆಗಾಗಿ, ಅದನ್ನ ದಾಟಿದ್ರೆ ಉಳಿಗಾಲವಿಲ್ಲ ಎಂದು ಎಚ್ಚಿರಿಕೆಯನ್ನೂ ಕೊಟ್ಟಿದ್ದಾರೆ ಸ್ವರಾಜ್ ಶೆಟ್ಟಿ.