` ಇನ್ಮೇಲೆ ಎಲ್ರೂ ನನ್ನ ಗಂಗಾ ಎಂದೇ ಕರೆಯುತ್ತಾರೆ : ಲೂಸ್ ಮಾದ ಯೋಗಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಇನ್ಮೇಲೆ ಎಲ್ರೂ ನನ್ನ ಗಂಗಾ ಎಂದೇ ಕರೆಯುತ್ತಾರೆ : ಲೂಸ್ ಮಾದ ಯೋಗಿ
Loose Mada Yogi Image From Headbush Movie

ದುನಿಯಾ ಚಿತ್ರ ಇಬ್ಬರ ಹೆಸರಿಗೆ ಚಿತ್ರದ ಟೈಟಲ್‍ನ್ನೇ ಬಿರುದಾಗಿ ಕೊಟ್ಟಿತು. ದುನಿಯಾ ಸೂರಿ ಮತ್ತು ದುನಿಯಾ ವಿಜಯ್. ಅದೇ ಚಿತ್ರದ ಪುಟ್ಟ ಪಾತ್ರದ ಮೂಲಕ ನಟಿಸಿದ ಯೋಗಿ ಲೂಸ್ ಮಾದ ಎಂದೇ ಫೇಮಸ್ ಆದರು. ಅದಾದ ಮೇಲೆ ಹೀರೋ ಆಗಿಯೇ ಹಲವು ಹಿಟ್ ಕೊಟ್ಟಿದ್ದರೂ ಜನ ಇವತ್ತಿಗೂ ಅವರನ್ನು ಗುರುತಿಸೋದು ಲೂಸ್ ಮಾದ ಯೋಗಿ ಎಂದೇ. ಯೋಗೇಶ್ ಎಂದು ಕರೆಯುವವರು ಕೂಡಾ ಕಡಿಮೆ. ಅಭಿಮಾನಿಗಳ ಪಾಲಿಗೆ ಲೂಸ್ ಮಾದ ಯೋಗಿಯೇ. ಅದು ಈ ಚಿತ್ರದಿಂದ ಬದಲಾಗಲಿದೆ. ಹೆಡ್ ಬುಷ್ ರಿಲೀಸ್ ಆದ ಮೇಲೆ ಎಲ್ಲರೂ ನನ್ನನ್ನು ಗಂಗಾ ಎಂದೇ ಕರೆಯುತ್ತಾರೆ ಎನ್ನುವುದು ಯೋಗಿ ಕಾನ್ಫಿಡೆನ್ಸ್.

ಗಂಗಾ ಪಾತ್ರವು ತನ್ನ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲಾಗಲಿದೆ. ಗಂಗಾ ಪಾತ್ರವು ನನಗೆ ಇಲ್ಲಿಯವರೆಗೆ ಸಿಕ್ಕಿರುವ ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿದೆ. ಇಲ್ಲಿಯವರೆಗೆ ನನ್ನನ್ನು ಸಾಮಾನ್ಯವಾಗಿ ಲೂಸ್ ಮಾದ ಎಂದು ಸಂಬೋಧಿಸುವ ಜನ ಹೆಡ್ ಬುಷ್ ನಂತರ ನನ್ನನ್ನು ಗಂಗಾ ಎಂದು ಕರೆಯಲು ಪ್ರಾರಂಭಿಸುತ್ತಾರೆ' ಎಂದು ಯೋಗಿ ಹೇಳುತ್ತಾರೆ.

ಅಕ್ಟೋಬರ್ 21 ರಂದು ಹೆಡ್ ಬುಷ್ ಬಿಡುಗಡೆಯಾಗುತ್ತಿದೆ. ಕೆಲ ವರ್ಷಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವಾಗ ನನ್ನ ದೃಷ್ಟಿಕೋನ ಮತ್ತು ಚಿಂತನೆಯ ಪ್ರಕ್ರಿಯೆಯು ಬದಲಾಗಿದೆ. 'ನಟರಾಗಿದ್ದಾಗ ನಾವು ಯಾವುದೇ ಪಾತ್ರವಾದರೂ ಅದಕ್ಕೆ ಹೊಂದಿಕೊಳ್ಳಲು ಅವಕಾಶವಿದೆ ಎಂದು ನಾನು ಯಾವಾಗಲೂ ನಂಬಿದ್ದೇನೆ. ಆದರೆ, ಅದು ನಾಯಕನ ಪಾತ್ರದಲ್ಲಿ ನಟಿಸುವಾಗ ಆಗುವುದಿಲ್ಲ. ಹಾಗಾಗಿ, ಈಗ ಹೀರೋ ಆಗುವುದಕ್ಕಿಂತ ಒಳ್ಳೆಯ ಪಾತ್ರಗಳತ್ತ ಗಮನ ಹರಿಸಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ ಯೋಗಿ.

ಧನಂಜಯ್ ಮತ್ತು ನಿರ್ದೇಶಕ ಶೂನ್ಯ ಅವರ  ಚಾಯ್ಸ್ ನಾನೇ ಆಗಿದ್ದೆ. ಅದೇ ನನಗೆ ಖುಷಿಯ ವಿಚಾರ. ಗಂಗಾ ಧೈರ್ಯಶಾಲಿ. ಮೊಂಡ. ನೇರ ಮತ್ತು ಜಯರಾಜನ ಆತ್ಮೀಯ ಗೆಳೆಯ. ಒಬ್ಬರಿಗೊಬ್ಬರು ನಿಲ್ಲುವ ಪರಿ ನಿಜಕ್ಕೂ ಉತ್ತಮವಾಗಿ ಮೂಡಿಬಂದಿದೆ ಅನ್ನೋದು ಯೋಗಿ ಮಾತು. ಅಗ್ನಿ ಶ್ರೀಧರ್ ಅವರ ದಾದಾಗಿರಿಯ ದಿನಗಳು ಹಾಗೂ ಮೇ ಡೇಸ್ ಇನ್ ದಿ ಅಂಡರ್‍ವಲ್ರ್ಡ್ ಪುಸ್ತಕವನ್ನು ಓದಿರುವ

ಯೋಗಿ ನಾನು ಹುಟ್ಟಿದ್ದು ಬೆಂಗಳೂರಿನಲ್ಲೇ.. ಬೆಳೆದಿದ್ದೂ ಬೆಂಗಳೂರಿನಲ್ಲೇ. ಭೂಗತ ಜಗತ್ತಿನ ಬಗ್ಗೆ ಕೇಳಿದ್ದೇನೆ ಹಾಗೂ ನೋಡಿದ್ದೇನೆ ಎನ್ನುತ್ತಾರೆ.

ಹೆಡ್ ಬುಷ್ ಇದೇ 21ರಂದು ರಿಲೀಸ್ ಆಗುತ್ತಿದೆ. ಜೈರಾಜ್, ಕೊತ್ವಾಲ್, ಗಂಗಾ ಹಾಗೂ ಭೂಗತ ಜಗತ್ತಿನ ಜೊತೆ ಥಳುಕು ಹಾಕಿಕೊಂಡ ಇನ್ನಿತರ ಪಾತ್ರಗಳ ಮೂಲ ನೈಜವಾದ ಕಥೆಯನ್ನೇ ಹೆಡ್ ಬುಷ್ ತೆರೆಗೆ ತರುತ್ತಿದೆ.