` ಜೊಂಬಿ ಮಾಡೆಲ್ ಸಿನಿಮಾದಲ್ಲಿ ಜೋಗಿ ಪ್ರೇಮ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಜೊಂಬಿ ಮಾಡೆಲ್ ಸಿನಿಮಾದಲ್ಲಿ ಜೋಗಿ ಪ್ರೇಮ್
Jogi Prem, Arun Ram Prasad Image

ಜೊಂಬಿ. ಹಾಲಿವುಡ್‍ನ ಈ ಚಿತ್ರ ನೋಡಿದವರು ಇವತ್ತಿಗೂ ಬೆಚ್ಚಿ ಬೀಳುತ್ತಾರೆ. ಸತ್ತವರೆಲ್ಲ ಎದ್ದು ಬಂದು ಕಣ್ಣಿಗೆ ಕಂಡವರನ್ನು ಕೊಲ್ಲುವ ಆ ಕಥೆ ಅದೇನೇ ಕಾಲ್ಪನಿಕ ಎಂದರೂ ಭಯ ಹುಟ್ಟಿಸುತ್ತದೆ. ಅಂಥಾದ್ದೇ ಒಂದು ಕಥೆಗೆ ಈಗ ಜೋಗಿ ಪ್ರೇಮ್ ಓಕೆ ಎಂದಿದ್ದಾರೆ. ಸಾಮಾನ್ಯವಾಗಿ ಲವ್, ರೌಡಿಂಸಂ ಹಿನ್ನೆಲೆಯ ಕಥೆಗೆ ತಾಯಿಯ ಸೆಂಟಿಮೆಂಟ್ ಟಚ್ ಕೊಟ್ಟು ಗೆದ್ದಿರುವ ಪ್ರೇಮ್ ಈ ಮೂಲಕ ಬೇರೆಯದೇ ಜಾನರ್ ಹಿಡಿದಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಅವರೇ ಪ್ರೊಡ್ಯೂಸರ್.

ಅರೆ.. ಧ್ರುವ ಸರ್ಜಾ ಜೊತೆಗಿನ ಸಿನಿಮಾ ಏನಾಯ್ತು ಎಂದು ಕನ್‍ಫ್ಯೂಸ್ ಆಗಬೇಡಿ. ಧ್ರುವ ಸರ್ಜಾ-ಪ್ರೇಮ್-ಕೆವಿಎನ್ ಸಿನಿಮಾಗೆ ಅವರೇ ನಿರ್ದೇಶಕ. ಆ ಚಿತ್ರದ ಅದ್ಧೂರಿತನದ ಝಲಕ್ ನಾಳೆ ಅಂದ್ರೆ ಅಕ್ಟೋಬರ್ 20ರಂದು ಗೊತ್ತಾಗಲಿದೆ. ಅದಾದ 2 ದಿನಕ್ಕೆ ಈ ಸಿನಿಮಾ ಸೆಟ್ಟೇರುತ್ತಿದೆ. ಇದು ಪ್ರೇಮ್ ಅಭಿನಯದ 5ನೇ ಸಿನಿಮಾ ಕೂಡಾ ಹೌದು. ಪ್ರೀತಿ ಏಕೆ ಭೂಮಿ ಮೇಲಿದೆ. ದಾಸವಾಳ. ಪ್ರೇಮ್ ಅಡ್ಡ. ಡಿಕೆ.. ಚಿತ್ರಗಳಲ್ಲಿ ನಟಿಸಿದ್ದ ಪ್ರೇಮ್ ಈ ಚಿತ್ರದಲ್ಲಿ ಹೀರೋ ಅಲ್ಲ.

ಹೀರೋ ಅರುಣ್ ರಾಮ್ ಪ್ರಸಾದ್. ಡೈರೆಕ್ಟರ್ ಎಂ.ಶಶಿಧರ್. ಗಾರ್ಘಾ ಅನ್ನೋ ಚಿತ್ರ ನಿರ್ದೇಶಿಸಿದ್ದ ಶಶಿಧರ್ ಅವರಿಗೆ ಇದು 2ನೇ ಸಿನಿಮಾ. ಪ್ರೇಮ್ ಜೊತೆಗೆ ಎ2 ಸಂಸ್ಥೆ ನಿರ್ಮಾಣಕ್ಕೆ ಕೈಜೋಡಿಸಿದೆ.