ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ.
ಈ ಮಾತು ಹೇಳಿರುವುದು ಆ ದಿನಗಳು ಖ್ಯಾತಿಯ.ತಮ್ಮ ಫೇಸ್ಬುಕ್ನಲ್ಲಿ ಈ ರೀತಿ ಬರೆದುಕೊಂಡಿರುವ ಚೇತನ್ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ಒಂದೆಡೆ ರಿಷಬ್ ನಟನೆ ಹಾಗೂ ನಿರ್ದೇಶನದ ಕಾಂತಾರ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆಯುತ್ತಿದೆ. 150 ಕೋಟಿ ಸಮೀಪದಲ್ಲಿದೆ. ರಿಷಬ್ ಶೆಟ್ಟಿಗೆ ಅಭಿಮಾನಿಗಳು ಡಿವೈನ್ ಸ್ಟಾರ್ ಎಂದೆಲ್ಲ ಕರೆಯುತ್ತಿದ್ದಾರೆ. ರಿಷಬ್ ಶೆಟ್ಟಿಯವರಿಗೆ ಅಭಿಮಾನಿಗಳು ಕಾಲಿಗೆ ನಮಸ್ಕರಿಸುತ್ತಿರುವ ಪ್ರಸಂಗಗಳೂ ನಡೆದಿವೆ. ಇದು ಕನ್ನಡ, ಕರಾವಳಿ ಹಾಗೂ ನಮ್ಮ ನೆಲದ ಸಂಸ್ಕøತಿ ಎತ್ತಿ ಹಿಡಿಯುವ ಸಿನಿಮಾ ಎನ್ನುತ್ತಿರುವಾಗಲೇ ಆ ದಿನಗಳು ಚೇತನ್ ಭೂತಕೋಲ ಹಿಂದೂಗಳ ಸಂಸ್ಕøತಿಯದ್ದಲ್ಲ. ವೈದಿಕ-ಬ್ರಾಹ್ಮಣ್ಯಕ್ಕಿಂತ ಹಿಂದಿನ ಮೂಲ ನಿವಾಸಿ ಸಂಸ್ಕøತಿ ಎಂದಿದ್ದಾರೆ.