ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸ೦ಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ ||
ಇದು ಬರುವುದು ರಾಮಾಯಣ ಬಾಲಕಾಂಡದಲ್ಲಿ. ಕೌಸಲ್ಯೆಯ ಸತ್ಪುತ್ರನಾದ ಶ್ರೀರಾಮನೇ, ಪೂರ್ವದಿಕ್ಕಿನಲ್ಲಿ ಪ್ರಾತಃಕಾಲ ಕಾಣುತ್ತಿದೆ, ಏಳು, ಎಲೈ ನರಶ್ರೇಷ್ಠನೆ, ದೇವತಾರಾಧನೆ ಮೊದಲಾದ ಕಾರ್ಯಗಳನ್ನು ಮಾಡು..
ಎಂದು ಶ್ರೀರಾಮನನ್ನು ಎಬ್ಬಿಸುವ ಪರಿಯಿದು. ಎಂ.ಎಸ್.ಸುಬ್ಬಲಕ್ಷ್ಮಿಯವರ ದನಿಯಲ್ಲಿ ಇಂದಿಗೂ ಈ ಸುಪ್ರಭಾತ ತಿರುಪತಿ ಸನ್ನಿಧಿಯಲ್ಲಿ, ಭಕ್ತರ ಮನೆ ಮನೆಗಳಲ್ಲಿ ರಿಂಗಣಿಸುತ್ತದೆ. ಈ ಆ ಶ್ಲೋಕದ ಮೊದಲ ಸಾಲನ್ನೇ ಸಿನಿಮಾ ಟೈಟಲ್ ಮಾಡಿಕೊಂಡಿದ್ದಾರೆ ನಿರ್ದೇಶಕ ಶಶಾಂಕ್.
ಇಲ್ಲಿ ರಾಮನವಾಗಿ ನಟಿಸುತ್ತಿರುವುದು ಮಾತ್ರ ಕೃಷ್ಣ. ಡಾರ್ಲಿಂಗ್ ಕೃಷ್ಣ. ನಾನು ಮಗನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದು ತಾಯಿ ಮತ್ತು ಮಗನ ಬಾಂಧವ್ಯದ ಕಥೆ ಹೇಳುವ ಚಿತ್ರ ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ. ಚಿತ್ರಕ್ಕೆ ಕೌರವ ಪ್ರೊಡಕ್ಷನ್ಸ್ ಕೂಡಾ ಕೈಜೋಡಿಸಿದ್ದು ಶಶಾಂಕ್ ನಿರ್ಮಾಣ ಮಾಡುತ್ತಿದ್ಧಾರೆ. ಚಿತ್ರದಲ್ಲಿ ಇಬ್ಬರು ಹೀರೋಯಿನ್‍ಗಳಿರ್ತಾರೆ. ಇಬ್ವರೂ ಹೊಸಬರಂತೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶಕರಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ತಂದೆ-ತಾಯಿಯಾಗಿ ಸುಧಾ ಬೆಳವಾಡಿ ಹಾಗೂ ರಂಗಾಯಣ ರಘು ನಟಿಸುತ್ತಿದ್ದಾರೆ. ಅಚ್ಯುತ್ ಕುಮಾರ್, ಗಿರಿರಾಜ್ ಸಹ ನಟಿಸುತ್ತಿದ್ದಾರೆ.