` ವದಂತಿ ಹಿಂದಿನ ಅಸಲಿ ಸತ್ಯ : ಈಗ ಹೇಗಿದೆ ಹಂಸಲೇಖ ಆರೋಗ್ಯ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವದಂತಿ ಹಿಂದಿನ ಅಸಲಿ ಸತ್ಯ : ಈಗ ಹೇಗಿದೆ ಹಂಸಲೇಖ ಆರೋಗ್ಯ?
Hamsalekha Image

ನಾದಬ್ರಹ್ಮ ಹಂಸಲೇಖ ಅವರಿಗೆ ಆರೋಗ್ಯ ಹದಗೆಟ್ಟಿದೆ. ಅದರಲ್ಲೂ ಎದೆನೋವು ಎಂದಾಗ ಅಭಿಮಾನಿಗಳು ಆತಂಕಗೊಂಡಿದ್ದಂತೂ ಹೌದು. ಈ ಮೊದಲು ಒಮ್ಮೆ ಹಾರ್ಟ್ ಸರ್ಜರಿ ಆಗಿದ್ದ ವಿಷಯವೂ ನೆನಪಿದ್ದವರು ಆಘಾತದಲ್ಲೇ ಇದ್ದರು. ರಾಜಾಜಿನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಂಸಲೇಖ ಈಗಲೂ ಅಲ್ಲಿಯೇ ಇದ್ದಾರೆ.

ಹಂಸಲೇಖ ಅವರಿಗೆ ಯಾವುದೇ ತೊಂದರೆ ಇಲ್ಲ. ಹೆದರುವ ಅವಶ್ಯಕತೆ ಇಲ್ಲ. ಈ ಹಿಂದೆ ಸರ್ಜರಿ ಮಾಡಿದ್ದೆವು. ಅವರಿಗೆ ಈಗ ವಿಶ್ರಾಂತಿಗೆ ಸೂಚಿಸಲಾಗಿದೆ ಎಂದಿದ್ದಾರೆ ಅಪೋಲೋ ಆಸ್ಪತ್ರೆ ವೈದ್ಯರು. ಅಷ್ಟೇ ಅಲ್ಲದೆ ಅವರಿಗೆ ಏನೂ ತೊಂದರೆ ಆಗಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಅಭಿಮಾನಿಗಳು ಇನ್ನಷ್ಟು ಗೊಂದಲಕ್ಕೀಡಾಗಲು ಆತಂಕಕ್ಕೀಡಾಗಲು ಕಾರಣ ಸಿದ್ದರಾಮಯ್ಯ ಟ್ವೀಟ್ ಕೂಡಾ ಒಂದು. ಮಾಜಿ ಸಿಎಂ ಸಿದ್ದರಾಮಯ್ಯನವರೇನೋ ಹಂಸಲೇಖ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದೇನೋ ಹಾರೈಸಿದರಾರೂ, ವದಂತಿಗಳ ಸುತ್ತ ಹಬ್ಬಿಕೊಂಡಿದ್ದ ಹಂಸಲೇಖ ಅನಾರೋಗ್ಯ ಎಂಬ ಸುದ್ದಿಗೆ ದೊಡ್ಡ ಬಲ ಸಿಕ್ಕಂತಾಯಿತು. ಸಿದ್ದರಾಮಯ್ಯನವರೇ ಟ್ವೀಟ್ ಮಾಡಿದ್ದಾರೆ ಎಂದ್ರೆ ಸುದ್ದಿಯಲ್ಲಿ ನಿಜವಿರಬೇಕು ಎಂದುಕೊಂಡರು. ಆದರೆ ಅದು ಅರ್ಧಸತ್ಯವಾಗಿತ್ತು.

ಹಾಗಾದರೆ ಆಗಿದ್ದು ಏನು? ಹಂಸಲೇಖ ಅವರ ಮಗಳು ತೇಜಸ್ವಿನಿ ಅವರಿಗೆ ಅನಾರೋಗ್ಯವಾಗಿದೆ. ಅವರನ್ನು ಕರೆದುಕೊಂಡು ವಿಜಯನಗರ ಆಸ್ಪತ್ರಗೆ ಹೋಗಿದ್ದಾರೆ. ಅದು ಹೊರಗೆ ಹಂಸಲೇಖ ಅವರಿಗೇ ಏನೋ ಆಗಿದೆ ಎಂಬ ಸುದ್ದಿ ಹಬ್ಬುವಂತೆ ಆಗಿದೆ. ಕೊನೆಗೆ ಹಂಸಲೇಖ ಅವರ ಮಗ ಸೂರ್ಯಪ್ರಕಾಶ್ ಹಾಗೂ ಮಗಳು ತೇಜಸ್ವಿನಿ ಇಬ್ಬರೂ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.