` ಧ್ರುವ-ಪ್ರೇಮ್ ಸಿನಿಮಾಗೆ ಮೋಹನ್ ಲಾಲ್ ಬರ್ತಾರಾ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಧ್ರುವ-ಪ್ರೇಮ್ ಸಿನಿಮಾಗೆ ಮೋಹನ್ ಲಾಲ್ ಬರ್ತಾರಾ?
Jogi Prem, Mohanlal, Dhruva Sarja Image

ಜೋಗಿ ಪ್ರೇಮ್ ಏನ್ ಮಾಡಿದ್ರೂ ಸೆನ್ಸೇಷನ್ ಮಾಡ್ತಾರೆ. ಶಿವಣ್ಣ-ಸುದೀಪ್ರನ್ನೇ ಒಂದು ಸಿನಿಮಾದಲ್ಲಿ ತಂದ ಏಕೈಕ ನಿರ್ದೇಶಕ ಪ್ರೇಮ್. ಈಗ ಏಕ್ ಲವ್ ಯಾ ನಂತರ ಧ್ರುವ ಸರ್ಜಾ ಅವರಿಗಾಗಿ ಸಿನಿಮಾ ಮಾಡುತ್ತಿದ್ದಾರೆ. ಸ್ಕ್ರಿಪ್ಟ್ ಪೂಜೆಯೂ ಆಗಿದೆ. ಕೆವಿಎನ್ ಪ್ರೊಡಕ್ಷನ್ಸ್ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಹಲವು ಸ್ಟಾರ್ ನಟರಿರುವ ಸಾಧ್ಯತೆ ಇದೆ. ಆ ಲಿಸ್ಟಿನಲ್ಲೀಗ ಮೋಹನ್ ಲಾಲ್ ಕೂಡಾ ಸೇರಿದ್ದಾರೆ.

ಅಕ್ಟೋಬರ್ 20ರಂದು ಚಿತ್ರದ ಟೈಟಲ್ ಟೀಸರ್ ಲಾಂಚ್ ಆಗುತ್ತಿದೆ. ಈ ಟೀಸರ್ ಲಾಂಚ್ಗೆ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅತಿಥಿಯೋ.. ಕಲಾವಿದರೊ.. ಎನ್ನುವುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಅಕ್ಟೋಬರ್ 20ರಂದು ಪ್ರೇಮ್ ಸರ್ ಪ್ರೈಸ್ ಕೊಡುವುದಂತೂ ಪಕ್ಕಾ.

ಮೋಹನ್ ಲಾಲ್ ಈ ಹಿಂದೆ ಪುನೀತ್ ರಾಜಕುಮಾರ್ ಜೊತೆ ನಟಿಸಿದ್ದರು. ಈ ಚಿತ್ರಕ್ಕೆ ಬಂದರೆ ಕನ್ನಡಿಗರಿಗೆ ಹಬ್ಬದೂಟವಾಗಲಿದೆ. ಆದರೆ.. 20ನೇ ತಾರೀಕಿನವರೆಗೆ ಕಾಯಬೇಕು.