` ಡಾರ್ಲಿಂಗ್ ಜೊತೆ ಶಶಾಂಕ್ ಸಿನಿಮಾ ಆರಂಭ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಡಾರ್ಲಿಂಗ್ ಜೊತೆ ಶಶಾಂಕ್ ಸಿನಿಮಾ ಆರಂಭ
Director Shashank, Darling Krishna Image

ಮುಗ್ಧ ಪ್ರೀತಿಯ ಗುಂಗು ಹತ್ತಿಸಿದ್ದ ಶಶಾಂಕ್ ಮತ್ತೊಂದು ಸಿನಿಮಾ ಘೋಷಿಸಿದ್ದರು. ಶಶಾಂಕ್ ಮುಂದಿನ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಜೊತೆ ಮಾಡುವುದಾಗಿ ಹೇಳಿದ್ದರು. ಈಗ ಆ ಚಿತ್ರದ ಮುಹೂರ್ತ ನೆರವೇರಿದೆ. ವಿಜಯದಶಮಿಯಂದು ಹೊಸ ಚಿತ್ರದ ಮುಹೂರ್ತವನ್ನು ಸರಳವಾಗಿ ಆಚರಿಸಿ ಶುಭಾರಂಭ ಮಾಡಿದ್ದಾರೆ ಶಶಾಂಕ್ ಮತ್ತು ಡಾರ್ಲಿಂಗ್ ಕೃಷ್ಣ.

ಸದ್ಯಕ್ಕೆ ಇರೋ ಮಾಹಿತಿಗಳು ಇಷ್ಟು ಮಾತ್ರವೇ. ಚಿತ್ರದ ಟೈಟಲ್ ಏನು? ಕಲಾವಿದರು, ತಂತ್ರಜ್ಞರು ಯಾರೆಲ್ಲ ಇದ್ದಾರೆ ಎಂಬ ಯಾವ ಮಾಹಿತಿಯನ್ನೂ ಬಿಟ್ಟು ಕೊಟ್ಟಿಲ್ಲ. ಲವ್ 360 ಚಿತ್ರದ ಮೂಲಕ ಮತ್ತೊಮ್ಮೆ ಗೆಲುವಿನ ಏಣಿ ಏರಿರುವ ಶಶಾಂಕ್ ಹಾಗೂ ಲಕ್ಕಿಮ್ಯಾನ್ ಚಿತ್ರದ ಮೂಲಕ ಹೊಸ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಡಾರ್ಲಿಂಗ್ ಕೃಷ್ಣ ಇಬ್ಬರೂ ಒಟ್ಟಾಗಿರುವ ಚಿತ್ರದಲ್ಲಿ ಲವ್ ಸ್ಟೋರಿಯೇ ಇರಲಿದೆ ಎಂಬುದು ಅಭಿಮಾನಿಗಳ ನಿರೀಕ್ಷೆ.