ವಿಕ್ರಾಂತ್ ರೋಣ ಚಿತ್ರದ ಭರ್ಜರಿ ಯಶಸ್ಸಿನ ನಂತರ ಹೊಸ ಚಿತ್ರವನ್ನು ಸುದೀಪ್ ಘೋಷಣೆ ಮಾಡಿಲ್ಲ. ಸದ್ಯಕ್ಕೆ ಬಿಗ್ ಬಾಸ್ ನಿರೂಪಣೆಯಲ್ಲಿಯೇ ಬ್ಯುಸಿಯಾಗಿರುವ ಸುದೀಪ್ ಮಧ್ಯೆ ಕಥೆಗಳನ್ನು ಕೇಳೋದನ್ನು ಬಿಟ್ಟಿಲ್ಲ. ಮುಂದಿನ ಸಿನಿಮಾ ಯಾರು ಮಾಡ್ತಾರಂತೆ ಅನ್ನೋ ಪ್ರಶ್ನೆಗೆ ಅಧಿಕೃತವಾಗಿ ಉತ್ತರವಿನ್ನೂ ಸಿಕ್ಕಿಲ್ಲ. ಇದರ ನಡುವೆ ಸೆನ್ಸೇಷನ್ ಕೊಟ್ಟಿದ್ದಾರೆ ಕಾರ್ತಿಕ್ ಗೌಡ.
ಹೊಸ ಆರಂಭ ಎಂದು ಸುದೀಪ್ ಅವರನ್ನು ಟ್ಯಾಗ್ ಮಾಡಿ ಒಂದು ಪೋಸ್ಟ್ ಹಾಕಿದ್ದಾರೆ. ಸದ್ಯಕ್ಕೆ ಕಾರ್ತಿಕ್ ಗೌಡ ಕೈತುಂಬಾ ಚಿತ್ರಗಳನ್ನಿಟ್ಟುಕೊಂಡಿದ್ದಾರೆ. ಹೊಯ್ಸಳ, ಉತ್ತರಕಾಂಡ. ಸೇರಿದಂತೆ ಹಲವು ಚಿತ್ರಗಳಿವೆ. ಇದರ ಜೊತೆಯೇ ಈ ಟ್ವೀಟ್ ಹೊರಬಿದ್ದಿದೆ.
ಹಾಗಾದರೆ ಸುದೀಪ್ ಮುಂದಿನ ಚಿತ್ರಕ್ಕೆ ಕಾರ್ತಿಕ್ ಗೌಡ ಪ್ರೊಡ್ಯೂಸರ್ ಇರಬಹುದಾ? ಈ ಪ್ರಶ್ನೆ ಅಭಿಮಾನಿಗಳ ತಲೆಯಲ್ಲಿ ಓಡಾಡುತ್ತಿದೆ. ಆದರೆ ಕಾರ್ತಿಕ್ ಗೌಡ ಹೊಂಬಾಳೆಯವರೂ ಹೌದು. ಹೊಂಬಾಳೆಯೇ ಇರಬಹುದಾ? ಇದು ಇನ್ನೊಂದು ಪ್ರಶ್ನೆ. ಆದಷ್ಟು ಬೇಗ ಸುದೀಪ್-ಕಾರ್ತಿಕ್ ಗೌಡ ಹೊಸ ಆರಂಭ ಶುರುವಾಗಲಿ.