` ಕರುನಾಡಿನ ಶ್ರೀಮಂತ ರೈತನಾದ ಸೋನು ಸೂದ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕರುನಾಡಿನ ಶ್ರೀಮಂತ ರೈತನಾದ ಸೋನು ಸೂದ್
Sonu Sood Image

ವಿಷ್ಣುವರ್ಧನ, ಕುರುಕ್ಷೇತ್ರ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟ ಸೋನು ಸೂದ್ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಇತ್ತೀಚೆಗೆ ಸೋನು ಸೂದ್ ಸುದ್ದಿ ಮಾಡಿದ್ದು ಸಿನಿಮಾಗಳಿಗಿಂತ ಹೆಚ್ಚಾಗಿ ಸಮಾಜ ಸೇವಾ ಕೆಲಸಗಳಲ್ಲಿ. ಸೋನು ಸೂದ್ ಅವರಿಗೆ ಈಗ ದೇಶಾದ್ಯಂತ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಸೋನು ಸೂದ್ ಈಗ ಕನ್ನಡಕ್ಕೆ ಶ್ರೀಮಂತನಾಗಿ ಬರುತ್ತಿದ್ದಾರೆ.

ಶ್ರೀಮಂತ ಅನ್ನೋದು ಅವರು ನಟಿಸಲಿರೋ ಹೊಸ ಕನ್ನಡ ಚಿತ್ರದ ಹೆಸರು. ರೈತನ ಪಾತ್ರ. ಇದು ಈ ಹಿಂದೆಯೇ ಆರಂಭವಾಗಿದ್ದ ಸಿನಿಮಾ. ಚಿತ್ರದ ಮಳೆ ಮುನಿದರೆ ಸಂತ.. ಹಾಡನ್ನು ಹಾಡಿರೋದು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಇತ್ತೀಚೆಗೆ ಚಿತ್ರದ ಹಾಡನ್ನು ರಿಲೀಸ್ ಮಾಡಲಾಗಿದೆ. ರೈತರ ಬದುಕನ್ನು ಸರ್ಕಾರ ಹೇಗೆ ನಿರ್ಲಕ್ಷಿಸಿದೆ ಎನ್ನುವುದರ ಜೊತೆಯಲ್ಲಿಯೇ ಮಾದರಿ ರೈತನಾಗಿ ಸೋನು ಸೂದ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹಾಡುಗಳಲ್ಲಿ ಗಾದೆ, ಒಗಟುಗಳನ್ನು ಬಳಸಿಕೊಳ್ಳಲಾಗಿದೆ. 8 ಹಾಡುಗಳಿವೆ. ಇದೊಂದು ಸಂಗೀತ ಮಯ ಸಿನಿಮಾ ಎನ್ನುವುದು ನಿರ್ದೇಶಕ ಹಾಸನ್ ರಮೇಶ್ ಮಾತು.

ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ಮೆನನ್, ರಮೇಶ್ ಭಟ್, ಸಾಧು ಕೋಕಿಲ, ರವಿಶಂಕರ್ ಗೌಡ, ರಾಜು ತಾಳಿಕೋಟೆ ಮೊದಲಾದವರು ನಟಿಸಿದ್ದಾರೆ.