ಶರ್ಮಿಳಾ ಮಾಂಡ್ರೆ. ಸದ್ಯಕ್ಕೆ ಗಾಳಿಪಟ 2 ಗೆದ್ದ ಖುಷಿಯಲ್ಲಿರೋ ಶರ್ಮಿಳಾ ಮಾಂಡ್ರೆ ಈಗ ಸೈಕಲಾಜಿಕಲ್ ಥ್ರಿಲ್ಲರ್ ಮೂಲಕ ಬರುತ್ತಿದ್ದಾರೆ. ತಮಿಳಿನಲ್ಲಿ. ತಮಿಳು ಶರ್ಮಿಳಾಗೆ ಹೊಸದೇನಲ್ಲ. ಆದರೆ 10 ವರ್ಷಗಳ ನಂತರ ಕಮ್ ಬ್ಯಾಕ್. 10 ವರ್ಷಗಳ ಹಿಂದೆ ಮಿರತ್ತಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಶರ್ಮಿಳಾ ಮಾಂಡ್ರೆ ಈಗ ಮರ್ಡರ್ ಲೈವ್ ಅನ್ನೋ ಚಿತ್ರಕ್ಕೆ ನಾಯಕಿಯಾಗಿದ್ಧಾರೆ.
ಮರ್ಡರ್ ಲೈವ್ ತಮಿಳಿನಲ್ಲಿ ತಯಾರಾಗಿದ್ಧರೂ ಕನ್ನಡದಲ್ಲೂ ಬರುತ್ತಿದೆ. ಚಿತ್ರಕ್ಕೆ ಕಥೆ ನೀಡಿರುವುದು ಹಾಲಿವುಡ್ನವರು. ಬ್ಲೈಂಡ್ ಡೇಟ್, ಹೈ ಸ್ಕೈ ಅನ್ನೋ ಚಿತ್ರಗಳನ್ನು ನಿರ್ದೇಶಿಸಿದ್ದ ಹಾಲಿವುಡ್ ಡೈರೆಕ್ಟರ್ ನಿಕೋ ಮಾಸ್ತರಾಕಿನ್ ಈ ಚಿತ್ರಕ್ಕೆ ಕಥೆ ನೀಡಿದ್ದಾರೆ. ಮುರುಗೇಶ್ ನಿರ್ದೇಶನ ಮಾಡಿದ್ದಾರೆ.
ಸೈಕೋ ಕಿಲ್ಲರ್ ಮತ್ತು ನಾಲ್ವರು ಮಹಿಳೆಯರ ಸುತ್ತ ಹೆಣೆದಿರುವ ಚಿತ್ರ. ಸೂರ್ಯ ಅಭಿನಯದ ಇಟಿ, ಶಿವಕಾರ್ತಿಕೇಯನ್ ನಟಿಸಿದ್ದ ಡಾಕ್ಟರ್ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ ವಿನಯ್ ರೈ ಇಲ್ಲಿ ವಿಲನ್. ಹಾಲಿವುಡ್ ನಟಿ ನವೋಮಿ ವಿಲ್ಲೋ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರೋ ಮರ್ಡರ್ ಲೈವ್ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.