ಗುರು ಶಿಷ್ಯರು ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಶರಣ್-ನಿಶ್ವಿಕಾ ನಾಯ್ಡು ಹಾಗೂ 12 ಹುಡುಗರ ಖೋಖೋ ಸೃಷ್ಟಿಸೋ ಗಮ್ಮತ್ತೇ ಬೇರೆ. ಸಿನಿಮಾವನ್ನು ಕನ್ನಡ ಚಿತ್ರರಸಿಕರಷ್ಟೇ ಅಲ್ಲ, ರಾಜಕಾರಣಿಗಳೂ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಿತ್ರವನ್ನು ಬಿಡುವು ಮಾಡಿಕೊಂಡು ನೋಡುವುದಾಗಿ ಹೇಳಿದ್ದರು. ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿತ್ರವನ್ನು ನೋಡಿದ್ದಾರೆ.
ಬೆಂಗಳೂರಿನ ಒರಾಯನ್ ಮಾಲ್‍ನಲ್ಲಿ ಸಿನಿಮಾ ನೋಡಿದ ಯಡಿಯೂರಪ್ಪ ಫುಲ್ ರಿಲ್ಯಾಕ್ಸ್ ಆಗಿದ್ದಾರೆ. ಅಂದಹಾಗೆ ಯಡಿಯೂರಪ್ಪ ಬಾಲ್ಯದಲ್ಲಿ ಖೋಖೋ ಮತ್ತು ಕಬಡ್ಡಿ ಆಡಿದ್ದವರೇ. ತಮ್ಮ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಜೊತೆ ಸಚಿವ ಆರ್.ಅಶೋಕ್ ಕೂಡಾ ಸಿನಿಮಾ ವೀಕ್ಷಿಸಿ ಖುಷಿ ಪಟ್ಟರು. ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಗುರು ಶಿಷ್ಯರು ಚಿತ್ರಕ್ಕೆ ಶರಣ್ ಮತ್ತು ತರುಣ್ ಸುಧೀರ್ ನಿರ್ಮಾಪಕರು.