ಹೆಡ್ ಬುಷ್ ಸಿನಿಮಾ ರಿಲೀಸ್ ಆಗೋದು ಮುಂದಿನ ತಿಂಗಳು. ಪ್ರಮೋಷನ್ ಶುರುವಾಗಿದೆ. ಇದು ಡಾಲಿ ಪಿಕ್ಚರ್ಸ್ ಸಿನಿಮಾ. ಡಾಲಿ ಧನಂಜಯ್, ಯೋಗಿ, ವಸಿಷ್ಠ ಸಿಂಹ, ರವಿಚಂದ್ರನ್, ದೇವರಾಜ್, ಶೃತಿ ಹರಿಹರನ್, ಪಾಯಲ್ ರಜಪೂತ್.. ಹೀಗೆ ಘಟಾನುಘಟಿಗಳನ್ನೇ ಒಂದುಗೂಡಿಸಿದ್ದಾರೆ ಡಾಲಿ. ಶೂನ್ಯ ನಿರ್ದೇಶನದ ಚಿತ್ರಕ್ಕೆ ಕಥೆ-ಚಿತ್ರಕಥೆ ಅಗ್ನಿ ಶ್ರೀಧರ್ ಅವರದ್ದು. ಆದರೆ ಚಿತ್ರದ ಶೂಟಿಂಗ್ ಯೋಗಿ ಸಂಸಾರವನ್ನೇ ಒಡೆದು ಹಾಕಿದ್ದ ಕಥೆ ಇದು.
ಬೆಳಗ್ಗೆ 6 ಗಂಟೆಗೆ ಹೋದ್ರೆ ಮಾರನೇ ದಿನ ರಾತ್ರಿ 2 ಗಂಟೆಗೆ ಮನೆಗೆ ಬರುತ್ತಿದ್ದೆವು. ನನ್ನ ಹೆಂಡ್ತಿ ಕೇಳ್ತಾ ಇದ್ಲು. ಯಾವ ಸೆಟ್ಟಲ್ಲೂ ಹೀಗಿರಲ್ವಲ್ಲಾ ಅಂತಾ.. ಏನ್ಮಾಡೋದು ಹಿಂಗೆ ಆಗ್ತಿದೆಯಮ್ಮ ಅಂದ್ರೆ ನಂಬಿರಲಿಲ್ಲ. ನಾನು ನಿನ್ನ ನಂಬಲ್ಲ ಅಂತ ಒಂದು ವಾರ ಮನೆ ಬಿಟ್ಟು ಹೋಗಿದ್ದಳು ಎಂದು ಯೋಗಿ ಹೇಳಿದ್ದು ಖುದ್ದು ಡಾಲಿಗೇ..
ಬೆಳಗ್ಗೆ 6.30ಕ್ಕೇ ಬಂದ್ರೂ ಮೊದಲ ಶಾಟ್ ಆಗ್ತಾ ಇದ್ದದ್ದು 12 ಗಂಟೆಗೆ. ಮೂಡ್ ಇಲ್ಲ ಅಂದ್ರೆ ಅದೂ ಇಲ್ಲ ಎಂದು ಡೈರೆಕ್ಟರ್ ಶೂನ್ಯ ಕುರಿತು ಹೇಳಿರೋ ಯೋಗಿ ಇದೂವರೆಗೆ 99 ಕಾಲ್ ಶೀಟ್ ಕೊಟ್ಟಿದ್ದೀನಿ. ಇದು 100ನೇದು. ಇವತ್ತಾದ್ರೂ ಸರಿಯಾದ ಟೈಮಿಗೆ ಮನೆಗೆ ಕಳಿಸು ಎಂದು ತಮಾಷೆ ಮಾಡಿದ್ದಾರೆ. ಡಾಲಿ ನಕ್ಕಿದ್ದಾರಷ್ಟೇ.