` ಕಾಮಿಡಿ ಕಮ್ ಬ್ಯಾಕ್ : ತೋತಾಪುರಿ ಸುರೇಶ್ ಮಾತು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕಾಮಿಡಿ ಕಮ್ ಬ್ಯಾಕ್ : ತೋತಾಪುರಿ ಸುರೇಶ್ ಮಾತು
Totapuri Suresh Image

ನಾಯಕ ಟೈಲರ್. ಹೆಸರು ಎರೇಗೌಡ. ನಾಯಕಿ ಬ್ಯಾಂಕ್ ಉದ್ಯೋಗಿ. ಹೆಸರು ಶಕೀಲಾ ಬಾನು. ಅವನು ಹಿಂದೂ. ಅವಳು ಮುಸ್ಲಿಂ. ಮುಸ್ಲಿಮಳಾದರೂ ಅಚ್ಚ ಕನ್ನಡ ಮಾತನಾಡುವ, ರಾಯರ ಮಠಕ್ಕೆ ಹೋಗಿ ಸೇವೆ ಮಾಡುವ ಹುಡುಗಿ. ಇವನದ್ದೋ ಭಯಂಕರ ಮಾತು. ಜಗ್ಗೇಶ್ ಮತ್ತು ಆದಿತಿ ಪ್ರಭುದೇವರ ಕಾಂಬಿನೇಷನ್ನು. ಜೊತೆಗೆ ಡಾಲಿ ಧನಂಜಯ, ಸುಮನ್ ರಂಗನಾಥ್ ಲವ್ ಸ್ಟೋರಿ. ದೊಣ್ಣೆ ರಂಗಮ್ಮ ಎನ್ನುವ ಬಿರಿಯಾನಿ ಮಾರುವ ಹೆಣ್ಣು. ನಿರ್ದೇಶಕರಾಗಿ ತೊಟ್ಟು ಕಿತ್ತಿರೋದು ವಿಜಯ್ ಪ್ರಸಾದ್.

ತೋತಾಪುರಿ ಡೈಲಾಗ್‍ಗಳು, ಚುರುಕು ಸಂಭಾಷಣೆ, ದೃಶ್ಯಗಳು ಎಲ್ಲವೂ ಕಾಮಿಡಿ ಮಯ. ಈ ಚಿತ್ರದ ಮೂಲಕ ಕಾಮಿಡಿ ಕಮ್ ಬ್ಯಾಕ್ ಮಾಡುತ್ತಿದೆ ಎನ್ನುವುದು ಪ್ರೊಡ್ಯುಸರ್ ಕೆ.ಎ.ಸುರೇಶ್ ವಿಶ್ವಾಸ. ಚಿತ್ರದ ಪ್ರತಿ ಪಾತ್ರವೂ ನಗಿಸುತ್ತಲೇ ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತೆ ಎನ್ನುವುದು ನಿರ್ಮಾಪಕರ ಕಾನ್ಫಿಡೆನ್ಸ್. ಆ ವಿಶ್ವಾಸದಲ್ಲೇ ಇದೇ ಮೊದಲ ಬಾರಿಗೆ ಕಾಮಿಡಿ ಚಿತ್ರವನ್ನು ಎರಡು ಭಾಗಗಳಲ್ಲಿ ತೆರೆಗೆ ತರುತ್ತಿದ್ದಾರೆ. ಬಾಹುಬಲಿ, ಪುಷ್ಪ, ಕೆಜಿಎಫ್‍ನಂತಾ ಚಿತ್ರಗಳು ಎರಡು ಭಾಗಗಳಾಗಿ ಬರುವುದು ಬೇರೆ. ಕಾಮಿಡಿ ಚಿತ್ರವೊಂದು ಬರುವುದೇ ಬೇರೆ. ಮೊದಲ ಭಾಗ ರಿಲೀಸ್ ಆಗಿದೆ. ಥಿಯೇಟರಲ್ಲಿದೆ. ನಗುವುದು.. ನಗಿಸುವುದು.. ಅಳಿಸುವುದು..ಎಲ್ಲವನ್ನೂ ಮಾಡಲಿದೆಯಂತೆ ಸಿನಿಮಾ. ಜಸ್ಟ್ ವಾಚ್ ಇಟ್.