ಯುವ ದಸರಾ ಉದ್ಘಾಟಿಸಲು ಅಶ್ವಿನಿ ಪುನೀತ್ ರಾಜ್ಕುಮಾರ್ ಆಗಮಿಸುತ್ತಿದ್ದಂತೆಯೇ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಶಿಳ್ಳೆ ಚಪ್ಪಾಳೆಗಳು ಮೊಳಗಿದವು. ರಾಜ್ ಕುಟುಂಬದಿಂದ ರಾಘವೇಂದ್ರ ರಾಜ್ಕುಮಾರ್, ವಿನಯ್ ರಾಜ್ಕುಮಾರ್ ಕೂಡಾ ವೇದಿಕೆಯಲ್ಲಿದ್ದರು. ಎಲ್ಲೆಲ್ಲೂ ಅಪ್ಪು ನಿನಾದ. ವಿಶ್ವ ವಿಖ್ಯಾತ ಮೈಸೂರು ದಸರಾದ ಯುವ ದಸರಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಅಶ್ವಿನಿ ಪುನೀತ್ ರಾಜಕುಮಾರ್. ಮೊದಲ ದಿನ ಅಪ್ಪು ನಮನ ಸಂಪೂರ್ಣ ಪುನೀತ್‍ಗೆ ಮೀಸಲಾಗಿತ್ತು. ವೇದಿಕೆಯಲ್ಲಿ ಉಸ್ತುವಾರಿ ಸಚಿವ ಎಸ್ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ರಾಜ್ ಕುಟುಂಬ ಸದಸ್ಯರಿದ್ದರು. ಎಲ್ಲಾ ಅಭಿಮಾನಿ ದೇವರುಗಳಿಗೆ ಸಾಷ್ಟಾಂಗ ನಮಸ್ಕಾರ. ಎಲ್ಲರೂ ಅಪ್ಪು ಅವರನ್ನು ಪ್ರೀತಿಸುತ್ತಿದ್ರಿ. ಈಗ ಪೂಜಿಸುತ್ತಿದ್ದೀರಿ. ನಿಮ್ಮಲ್ಲರಲ್ಲೂ ಅಪ್ಪು ಕಾಣುತ್ತಿದ್ದೇನೆ ಎಂದರು ರಾಘವೇಂದ್ರ.
ಸಂಸದ ಪ್ರತಾಪ್ ಸಿಂಹ ಅಪ್ಪು ನಮನ ಕಾರ್ಯಕ್ರಮ ಉದ್ಘಾಟನೆಯನ್ನು ಅಶ್ವಿನಿ ಅವರಿಂದಲೇ ಮಾಡಿಸಬೇಕು ಎಂಬುದು ಎಸ್ಟಿ. ಸೋಮಶೇಖರ್ ಆಸೆ ಆಗಿತ್ತು. ಅಭಿಮಾನಿಗಳ ಆಶಯ ಕೂಡ ಅದೇ ಆಗಿತ್ತು ಎಂದರು. ರಾಜ್ ಕುಟುಂಬ ಸದಸ್ಯರಿಗೆ ಧನ್ಯವಾದ ತಿಳಿಸಿದರು. ನಟ ವಸಿಷ್ಠ ಸಿಂಹ ಬೊಂಬೆ ಹೇಳುತೈತೆ ಹಾಡು ಹಾಡಿದರು.
ಗಾಯಕಿ ಅನುರಾಧ ಭಟ್, ಆಕಾಶ್ ಚಿತ್ರದ ‘ಆಹಾ ಎಂತ ಆಕ್ಷಣ, ನೆನೆದರೆ ತಲ್ಲಣ’ ಎಂಬ ಹಾಡನ್ನು ಹಾಡಿದರು. ಗುರುಕಿರಣ್ ಮೈಲಾರಿ ಚಿತ್ರದ ‘ಮೈಲಾಪುರದ ಮೈಲಾರಿ’ ಹಾಗೂ ಅಪ್ಪು ಚಿತ್ರದ ‘ತಾಲಿಬಾನ್ ಅಲ್ಲಾ ಅಲ್ಲಾ... ಬಿನ್ ಲಾಡೆನ್ ಅಲ್ವೆ ಅಲ್ಲ’, ಅಭಿ ಚಿತ್ರದ ‘ಮಾಮಾ ಮಜಾ ಮಾಡು’ ಹಾಡನ್ನು ಮತ್ತು ಮೌರ್ಯ ಚಿತ್ರದ ‘ಅಮ್ಮಾ ಅಮ್ಮಾ ಐ ಲವ್ ಯೂ’ ಹಾಡನ್ನು ಹಾಡಿ ಅಭಿಮಾನಿಗಳನ್ನು ಕುಣಿಸಿ ರಂಜಿಸಿದರು. ರಾಘವೇಂದ್ರ ರಾಜ್ ಕುಮಾರ್ ಪುನೀತ್ ಅವರಿಗಾಗಿ ಕಸ್ತೂರಿ ನಿವಾಸದ ‘ಆಡಿಸಿ ನೋಡು, ಬಿಳಿಸಿ ನೋಡು, ಉರುಳಿ ಹೋಗದು.. ಹಾಡನ್ನು ಹಾಡಿದರು.